ಯುಪಿಎಸ್ಸಿ ಪರೀಕ್ಷೆಯಲ್ಲಿ 33 ನೇ ರ್ಯಾಂಕ್ ; ಮೈಸೂರಿನ ಸೌಮ್ಯಗೆ ʼ ಗಂಧದ ಗುಡಿʼ ಬಯಕೆ..!
ಮೈಸೂರು, ಮೇ.09,2024: (www.justkannada.in news) ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಲೇ ಬೇಕು ಎಂಬ ಛಲದೊಂದಿಗೆ ಪರೀಕ್ಷೆ ಎದುರಿಸಿದ ಮೈಸೂರಿನ ಯುವತಿ ಸತತ ಐದು ಸಲ ಪರೀಕ್ಷೆ ಎದುರಿಸಿ, ಆರನೇ ಪ್ರಯತ್ನದಲ್ಲಿ ಆಸೆ ಈಡೇರಿಸಿಕೊಂಡಿದ್ದಾರೆ.
ಮೈಸೂರಿನ ಸೌಮ್ಯ ರಂಪುರೆ ಈ ಸಾಧನೆ ಮಾಡಿದ ಯುವತಿ. ಮಗಳ ಈ ಸಾಧನೆಯ ಸಂತಸವನ್ನು ಹಂಚಿಕೊಳ್ಳಲು ಇಂದು “ ಜಸ್ಟ್ ಕನ್ನಡ “ ಕಚೇರಿಗೆ ಸೌಮ್ಯ ಅವರ ತಂದೆ ಅಶೋಕ್ ಜತೆಗೆ ಸ್ಥಳೀಯ ನಗರ ಪಾಲಿಕೆ ಮಾಜಿ ಸದಸ್ಯರು ಹಾಗೂ ಬಿಜೆಪಿ ಮುಖಂಡ ಜೆ.ಎಸ್.ಜಗದೀಶ್ ಆಗಮಿಸಿ ಬಡಾವಣೆ ನಿವಾಸಿ ಯುವತಿಯ ಉನ್ನತ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿಹಿ ಹಂಚಿ ಸಂಭ್ರಮಗೊಂಡರು.
ಈ ವೇಳೆ ಮಾತನಾಡಿದ ಸೌಮ್ಯ ಅವರು ಹೇಳಿದಿಷ್ಟು..
ಯುಪಿಎಸ್ ಸಿ ಅನ್ನೋದು ಒಂದು ಜರ್ನಿ. ನಾನು ಸಹ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತ ಯುಪಿಎಸ್ ಸಿ ಪರೀಕ್ಷೆ ಅಟೆಂಡ್ ಮಾಡಿದ್ದೆ. 5 ಬಾರಿ ಯುಪಿಎಸ್ ಸಿ ಪರೀಕ್ಷೆಯನ್ನ ಬರೆದಿದ್ದೇನೆ. ನನ್ನ ಸತತ ಪ್ರಯತ್ನದಿಂದಾಗಿ 6 ನೇ ಬಾರಿ 33 ನೇ ರ್ಯಂಕ್ ಸಿಕ್ಕಿದೆ. ತುಂಬಾ ಖುಷಿಯಾಗುತ್ತಿದೆ.
ನನ್ನ ಈ ಸಾಧನೆಗೆ ನನ್ನ ಶಾಲಾ ಶಿಕ್ಷಕರು, ಪೋಷಕರು, ಗುರುಗಳು ಎಲ್ಲರ ಆಶೀರ್ವಾದ ಇದೆ. ನನ್ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಶಕ್ತಿ ಇದೆ ಎಂದು ತೋರಿಸಿಕೊಟ್ಟಿದ್ದು ನನ್ನ ಗುರುಗಳು. ಯಾರು ಯಾವ ಕ್ಷೇತ್ರವನ್ನ ಸಹ ಆಯ್ಕೆ ಮಾಡಿಕೊಳ್ಳಬಹುದು.
ನಾನು IFS ಬಗ್ಗೆ ಅನೇಕರ ಬಳಿ ಮಾಹಿತಿ ಪಡೆದು ಇದನ್ನ ಆಯ್ಕೆ ಮಾಡಿಕೊಂಡೆ. ಒಂದೇ ಪ್ರಯತ್ನಕ್ಕೆ ಎಲ್ಲವನ್ನ ಸಾಧಿಸುತ್ತೇನೆ ಅನ್ನೋದು ಅಸಾಧ್ಯ. ನಿರಂತರ ಪರಿಶ್ರಮದಿಂದ ಮಾತ್ರ ಸಾಧನೆ ಮಾಡಲಿಕ್ಕೆ ಸಾಧ್ಯ. ಯಾವುದೇ ಕೊಚಿಂಗ್ ಪಡೆಯದೆ ಸತತ ಪರಿಶ್ರಮದಿಂದ ಪರೀಕ್ಷೆ ಎದುರಿಸಿ ಅದರಲ್ಲಿ ಸಕ್ಸಸ್ ಕಂಡಿರುವೆ. ಗ್ರಾಮೀಣ ಪ್ರದೇಶದವರು, ಇಂಗ್ಲಿಷ್ ಜ್ಞಾನ ಕಡಿಮೆ ಎಂಬ ಯಾವುದೇ ಕೀಳರಿಮೆ ಬೇಡ. ಶ್ರಮ ಹಾಗೂ ಶ್ರದ್ಧೆಯಿಂದ ವ್ಯಾಸಂಗ ಮಾಡಿದರೆ ಪರೀಕ್ಷೆ ಪಾಸು ಮಾಡುವುದು ಸುಲಭದ ಕೆಲಸ.
ನಮ್ಮ ರಾಜ್ಯವನ್ನ ಗಂಧದಗುಡಿ ಅಂತ ಕರಿತಾರೆ. ಸಾಕಷ್ಟು ಅರಣ್ಯ ಪ್ರದೇಶಗಳು ಇವೆ. ಸಮಾಜಕ್ಕೆ ನಾವು ಏನನ್ನಾದರೂ ಕೊಡಬೇಕೆಂಬ ಆಸೆಯೊಂದಿಗೆ ಕೆಲಸ ಮಾಡಲು ಸಂತೋಷ ಆಗುತ್ತದೆ ಎನ್ನುತ್ತಾರೆ ಯುಪಿಎಸ್ ಸಿ ನಲ್ಲಿ 33 ನೆ ರ್ಯಂಕ್ ಪಡೆದ ಸೌಮ್ಯ ರಂಪುರೆ.
key words : Mysore , Sowmya, UPSC , 33 rd. Rank, IFS
summary:
Mysuru: A young woman from Mysuru, who appeared for the UPSC exam with the determination to clear the UPSC exam, has cleared the exam five times in a row and has fulfilled her wish in her sixth attempt.
Soumya Rampure of Mysore is the young woman who has achieved this feat. Soumya's father Anand, along with former corporator and BJP leader J.S. Jagadeesh, arrived at the 'Just Kannada' office today and distributed sweets to the girl who was a resident of the locality.