For the best experience, open
https://m.justkannada.in
on your mobile browser.

ಮೈಸೂರು ವಿವಿ ಕ್ರೀಡಾ ಮೈದಾನದಲ್ಲಿ ಖಾಸಗಿ ತರಬೇತಿದಾರರದ್ದೇ ಆಟ..!

09:08 PM Jun 03, 2024 IST | mahesh
ಮೈಸೂರು ವಿವಿ ಕ್ರೀಡಾ ಮೈದಾನದಲ್ಲಿ ಖಾಸಗಿ ತರಬೇತಿದಾರರದ್ದೇ ಆಟ

ಮೈಸೂರು, ಜೂ.03,2024: (www.justkannada.in news) ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗಕ್ಕೆ ಒಳಪಡುವ ವಿವಿಧ ಕ್ರೀಡಾ ಮೈದಾನಗಳಲ್ಲಿ ಖಾಸಗಿ ತರಬೇತಿದಾರರ ಅತಿಕ್ರಮಣದಿಂದ ಯೂನಿವರ್ಸಿಟಿ ವಿದ್ಯಾರ್ಥಿಗಳಿಗೆ ತರಬೇತಿ ಪಡೆಯುವುದೇ ದುಸ್ತರವಾಗಿದೆ ಎಂದು ದೂರು ಕೇಳಿ ಬಂದಿದೆ.

ಬೆಳಿಗ್ಗೆ 6 ಗಂಟೆಯಿಂದ 9 ರವರೆಗೆ ಸಂಜೆ 4 ರಿಂದ 6:30 ಗಂಟೆವರೆಗೆ ಖಾಸಗಿ ವ್ಯಕ್ತಿಗಳು ಬಂದು ತರಬೇತಿ ನೀಡಿ ಹಣ ವಸೂಲಿ ಹಾಗೂ ಇನ್ನಿತರೆ ಉಡುಗೊರೆಗಳನ್ನು ಪಡೆಯುತ್ತಿದ್ದಾರೆ.

ವಿಶ್ವವಿದ್ಯಾನಿಲಯದಲ್ಲಿ  ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ಸಿಗಬೇಕು.  ವಿಶ್ವವಿದ್ಯಾನಿಲಯದ ನೌಕರರು ಹೊರತುಪಡಿಸಿ ಬೇರೆಯವರು ತರಬೇತಿ ನೀಡುವುದು ನಿಯಮ ಬಾಹಿರ.ಬಾಸ್ಕೆಟ್ ಬಾಲ್  ಜಿಮ್ನ್ಯಾಸ್ಟಿಕ್,  ಅಥ್ಲೆಟಿಕ್ಸ್ ಮತ್ತು ಟೆನ್ನಿಸ್ ಮೈದಾನಗಳಿಗೆ ಅತಿಕ್ರಮಣ ಪ್ರವೇಶ ಮಾಡಿ ತರಬೇತಿ ನೀಡುತ್ತಿದ್ದಾರೆ.

ಇದನ್ನು ಪ್ರಶ್ನಿಸಲು ಹೋದವರಿಗೆ ಹಲ್ಲೆ ಮಾಡುವುದು,  ಸುಳ್ಳು ದೂರು ನೀಡುವುದು ಮಾಡುತ್ತಿದ್ದಾರೆ. ಈಗಾಗಲೇ ನಿರ್ದೇಶಕರು ದೈಹಿಕ ಶಿಕ್ಷಣ ವಿಭಾಗ ಇವರಿಗೆ ಲಿಖಿತ ಮನವಿ ಪತ್ರವನ್ನು ಕೂಡ ನೀಡಿದ್ದೇವೆ ಇದುವರೆಗೆ ಯಾವುದೇ ಕ್ರಮವಾಗಿಲ್ಲ. ಇದರಿಂದ ಕೂಡಲೇ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲು ವಿದ್ಯಾರ್ಥಿ ಕ್ರೀಡಾಪಟುಗಳು ಮನವಿ ಮಾಡಿದ್ದಾರೆ.

( ರಾಜಶೇಖರ್ ಅಂತಿಮ ಬಿಎಸ್ಸಿ , ಚಂದನ್ ಅಂತಿಮ ಬಿಎಸ್ಸಿ , ಪಟೇಲ್ ಕ್ರಿಕೆಟ ಆಟಗಾರ, ಕಾರ್ತಿಕ್ ನಾಯಕ್ ಬ್ಯಾಡ್ಮಿಂಟನ್ ಆಟಗಾರ. ಯುವರಾಜ ಕಾಲೇಜು ಮೈಸೂರು ವಿಶ್ವವಿದ್ಯಾನಿಲಯ)

key words: Mysore university, private trainers, physical education department,UOM

SUMMARY:

There have been complaints that encroachments by private trainers in various sports grounds under the physical education department of the prestigious University of Mysore (UoM) have made it difficult for university students to train.

Tags :

.