For the best experience, open
https://m.justkannada.in
on your mobile browser.

MYSORE; ಶಿಕ್ಷಣ ವಂಚಿತ ಮಕ್ಕಳ ಪಾಲಿನ “ ವಕೀಲ್‌ ಸಾಬ್‌ “...!

03:32 PM Jul 16, 2024 IST | mahesh
mysore   ಶಿಕ್ಷಣ ವಂಚಿತ ಮಕ್ಕಳ ಪಾಲಿನ “ ವಕೀಲ್‌ ಸಾಬ್‌ “

Harish Rajalakshmi, a resident of Kyathamaranahalli in Mysuru, The young man, a lawyer by profession, has noticed that children in and around his ward, which is largely poor, are staying away from education. Since these children, who are lagging behind in learning in school, are unable to pay for tuitions, they are teaching such children as teachers themselves

ಮೈಸೂರು, ಜು.16,2024: (www.justkannada.in news) ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸರ್ಕಾರ ಅನೇಕ ಕಾರ್ಯಕ್ರಮಗಳನ್ನ ಜಾರಿಗೂ ತಂದರು ಹಲವು ಮಕ್ಕಳು ವಿದ್ಯಾಭ್ಯಾಸದಿಂದ ದೂರ ಸರಿಯುತ್ತಿದ್ದಾರೆ.

ಕಾರಣ ಮಕ್ಕಳ ಕಡೆ ಪೋಷಕರು ಹೆಚ್ಚಾಗಿ ಗಮನಹರಿಸದೆ ಇರುವುದು. ಈ ಸಲುವಾಗಿಯೇ ಬಹುತೇಕ ಕಡೆಗಳಲ್ಲಿ ಅನಕ್ಷರಸ್ಥ ಕುಟುಂಬದ ಬಡ ಮಕ್ಕಳು ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ. ಇವರಿಗೆ ಶಿಕ್ಷಣದ ಮಹತ್ವ ತಳಿಸಿಕೊಡುವವರು ಯಾರು..? ಎಂಬ ಜಿಜ್ಞಾಸೆ ಮೂಡಿದ ಹೊತ್ತಲ್ಲೇ ಆಶಾ ಕಿರಣದಂತೆ ಕಂಗೊಳಿಸಿದ್ದಾರೆ ಮೈಸೂರಿನ ಈ ಯುವ ವಕೀಲ. ಶಾಲಾ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ಈ ಯುವಕನ ಒತ್ತಾಸೆ.

ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿ ಹರೀಶ್ ರಾಜಲಕ್ಷ್ಮಿ ಇವರೇ ಈ ಕೆಲಸ ಮಾಡುತ್ತಿರೋದು. ವೃತ್ತಿಯಲ್ಲಿ ವಕೀಲರಾಗಿರುವ ಈ ಯುವಕ, ಬಹುತೇಕ ಬಡತವನ್ನೇ ಹಾಸುಹೊದ್ದಿರುವ ತಮ್ಮ ವಾರ್ಡಿನ ಸುತ್ತಮುತ್ತಲಿನ ಮಕ್ಕಳು ಶಿಕ್ಷಣದಿಂದ ದೂರ ಉಳಿಯುತ್ತಿರುವುದನ್ನು  ಗಮನಿಸಿದ್ದಾರೆ. ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಈ ಮಕ್ಕಳಿಗೆ ಟ್ಯೂಷನ್ ಗೆ ಹಣ ಕಟ್ಟಲು ಸಾಧ್ಯವಾಗದ ಹಿನ್ನೆಲೆ,  ಅಂತಹ ಮಕ್ಕಳಿಗೆ ಇವರೇ ಖುದ್ದು  ಶಿಕ್ಷಕನಾಗಿ ಪಾಠ ಮಾಡುತ್ತಿದ್ದಾರೆ.

ಮೈಸೂರಿನ ಕ್ಯಾತಮಾರನಹಳ್ಳಿಯ ಎಕೆ ಕಾಲೋನಿಯ ರಾಮಮಂದಿರದಲ್ಲಿ ಹರೀಶ್‌ ಪಾಠ ಮಾಡಲು ಶುರು ಮಾಡಿದ ಆರಂಭದಲ್ಲಿ ಕೇವಲ 13 ಮಕ್ಕಳು ಮಾತ್ರ ಆಸಕ್ತಿ ತೋರಿಸಿದರು. ಆದರೂ ಇದರಿಂದ ದೃತಿಕೆಡದ ಹರೀಶ್‌ ರ ಆತ್ಮವಿಶ್ವಾಸ ಫಲ ನೀಡಿದೆ. ಈಗ ಇಂದು ಇಲ್ಲಿ 80 ಕ್ಕೂ ಹೆಚ್ಚು ಮಕ್ಕಳು  ಪಾಠ ಕೇಳಲು ಆಸಕ್ತಿ ತೋರಿಸಿದ್ದು ನಿತ್ಯ ಹಾಜರಾಗುತ್ತಿದ್ದಾರೆ.

ಬೆಂಕಿಯಲ್ಲಿ ಅರಳಿದ ಹೂ :

ವಕೀಲ ಹರೀಶ್‌  ಆರ್ಥಿಕವಾಗಿ ಅನುಕೂಲವಾಗಿರುವ ಕುಟುಂಬಕ್ಕೆ ಸೇರಿದವರೇನು ಅಲ್ಲ. ಅವರು ಸಹ ಬದುಕಿನ ಕಷ್ಠಗಳನ್ನು ಎದುರಿಸಿಯೇ ಲಾಯರ್‌ ಆಗಿರೋದು. ವಕೀಲನಾಗುವ ಮುನ್ನ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಇವರ ಈ ಸಾಧನೆ ಮಾಧ್ಯಮಗಳಲ್ಲೂ ಪ್ರಕಟವಾಗಿತ್ತು. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಹರೀಶ್‌, ತನ್ನಂತೆ ಇರುವ ಅಸಹಾಯಕರ ನೆರವಿಗೆ ಟೋಂಕ ಕಟ್ಟಿದ್ದಾರೆ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಹೇಳಿರುವಂತೆ ಶಿಕ್ಷಣ ಕ್ರಾಂತಿಯೇ ಸ್ವಾವಲಂಭನೆ ಹಾಗೂ ಸ್ವಾಭಿಮಾನಕ್ಕೆ ಮೂಲ ಎಂಬುದನ್ನು ಅಕ್ಷರಶಃ ಪಾಲಿಸುತ್ತಿದ್ದಾರೆ.

ನೆರವು:

ಯಾವುದೇ ಪ್ರತಿಫಲಪೇಕ್ಷೆ ಇಲ್ಲದೆ ಮಕ್ಕಳಿಗೆ ಟ್ಯೂಷನ್ ಮಾಡುತ್ತಿರುವ ಹರೀಶ್‌ ಅವರ  ಕಾರ್ಯಕ್ಕೆ  ಮೈಸೂರಿನ ಮತ್ತೊರ್ವ ವಕೀಲ ಹಾಗೂ ʼಲಾಗೈಡ್‌ ʼ ಕನ್ನಡ ಕಾನೂನು ಮಾಸ ಪತ್ರಿಕೆ ಸಂಪಾದಕರಾದ  ಎಚ್.‌ ಎನ್.‌ ವೆಂಕಟೇಶ್‌ ಸಾಥ್‌ ನೀಡಿದ್ದಾರೆ., ಟ್ಯೂಷನ್‌ ಗೆ ಅಗತ್ಯವಿರುವ ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡಿ ಹರೀಶ್‌ ಬೆನ್ನುತಟ್ಟಿದ್ದಾರೆ. ಇವರಿಗೆ ಮೈಸೂರು ನಗರ ಪಾಲಿಕೆ ಮಾಜಿ ಸದಸ್ಯ, ಕಾಂಗ್ರೆಸ್‌ ಮುಖಂಡ ಲೊಕೇಶ್‌ ವಿ.ಪಿಯಾ ಸಹ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸುತ್ತಿದ್ದಾರೆ.

key words: Mysore, Vakil Sab, advocate, Harish Rajalakshmi

SUMMARY:

Harish Rajalakshmi, a resident of Kyathamaranahalli in Mysuru, is doing this work. The young man, a lawyer by profession, has noticed that children in and around his ward, which is largely poor, are staying away from education. Since these children, who are lagging behind in learning in school, are unable to pay for tuitions, they are teaching such children as teachers themselves.

When Harish started teaching at Rama Mandir in A.K. Colony in Kyathamaranahalli in Mysuru, only 13 children showed interest. However, Harish's confidence has paid off. Today, more than 80 children have shown interest in listening to lessons and are attending them regularly.

Tags :

.