For the best experience, open
https://m.justkannada.in
on your mobile browser.

ಮೈತ್ರಿ ಅಭ್ಯರ್ಥಿ ಯದುವೀರ್ ಗೆಲುವು: ಸಂತಸ ಹಂಚಿಕೊಂಡ ಶಾಸಕ ಶ್ರೀವತ್ಸ.

03:58 PM Jun 04, 2024 IST | prashanth
ಮೈತ್ರಿ ಅಭ್ಯರ್ಥಿ ಯದುವೀರ್ ಗೆಲುವು  ಸಂತಸ ಹಂಚಿಕೊಂಡ ಶಾಸಕ ಶ್ರೀವತ್ಸ

ಮೈಸೂರು,ಜೂನ್,4,2024 (www.justkannada.in): ಮೈಸೂರು-ಕೊಡಗು ಕ್ಷೇತ್ರದಲ್ಲಿ  ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಯದುವೀರ್ ಶ್ರೀಕಂಠದತ್ತ ಚಾಮರಾಜ ಒಡೆಯರ್ ಭರ್ಜರಿ ಗೆಲುವು ಸಾಧಿಸಿದ್ದು ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಶ್ರೀವತ್ಸ ಸಂತಸ ಹಂಚಿಕೊಂಡಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಶ್ರೀವತ್ಸ, ನಿರೀಕ್ಷೆಯಂತೆ ನಮ್ಮ ಮೈತ್ರಿ ಅಭ್ಯರ್ಥಿ ಯದುವೀರ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಮಹಾರಾಜರನ್ನ ಅರಮನೆಯಿಂದ ಹೊರಗಡೆ ಬರೋದಿಲ್ಲ, ಎಸಿಯಲ್ಲಿರುವವರಿಗೆ  ಜನರ ಸಮಸ್ಯೆಗಳು ಗೊತ್ತಿದೆಯಾ.? ಎಂದು ಕಾಂಗ್ರೆಸ್ ನವರು ಅಪಪ್ರಚಾರ ಮಾಡಿದ್ದರು. ಜೊತೆಗೆ ನಮ್ಮ ಅಭ್ಯರ್ಥಿ ಸೋಲಿಸಲಿಕ್ಕೆ ಒಕ್ಕಲಿಗ ಕಾರ್ಡ್ ಬಳಸಿದರು. ಆದರೂ ಪ್ರಬುದ್ಧ ಮತದಾರರು ನಮ್ಮ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಆಶೀರ್ವಾದ ಮಾಡಿರುವುದು ನಮಗೆಲ್ಲ ಸಂತಸವಾಗಿದೆ.

ಜೊತೆಗೆ ಸಿಎಂ ತವರಿನಲ್ಲಿ ಬಿಜೆಪಿ ಮೂರು ಬಾರಿ ಸತತ ಗೆಲುವು ಸಾಧಿಸಿರುವುದು ನಮಗೆಲ್ಲ ಸಂತಸವನ್ನುಂಟುಮಾಡಿದೆ. ನನ್ನ ಕ್ಷೇತ್ರದಲ್ಲಿ 56 ಸಾವಿರ ಮತಗಳ ಲೀಡನ್ನ ಕೊಟ್ಟಿರುವುದು ನಮಗೆ ಖುಷಿಯಾಗಿದೆ ಎಂದು ಶಾಸಕ ಶ್ರೀವತ್ಸ ನುಡಿದರು.

Key words: mysore, Yaduveer, victory, MLA, Srivatsa

Tags :

.