HomeBreaking NewsLatest NewsPoliticsSportsCrimeCinema

ಮೈಸೂರು ಮೃಗಾಲಯ: ಪ್ರವಾಸಿಗರಿಗಾಗಿ ಇನ್ಮುಂದೆ ‘ವಾಟ್ಸಾಪ್ ಆನ್ ಲೈನ್ ಟಿಕೆಟ್’ ಲಭ್ಯ.

04:29 PM Jun 15, 2024 IST | prashanth

ಮೈಸೂರು,ಜೂನ್,15,2024 (www.justkannada.in): ಮೈಸೂರು ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಸಿಹಿಸುದ್ದಿ ಸಿಕ್ಕಿದ್ದು ಇನ್ಮುಂದೆ ವಾಟ್ಸಾಪ್ ಆನ್ ಲೈನ್ ಟಿಕೆಟ್’ ಲಭ್ಯವಾಗಲಿದೆ.

ಹೌದು ಇಂದು ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ  ವಾಟ್ಸಾಪ್ ಆನ್ಲೈನ್ ಟಿಕೆಟ್ ಉದ್ಘಾಟನೆ ಮಾಡಿದರು.  ಇನ್ಮುಂದೆ ಪ್ರವಾಸಿಗರಿಗೆ ವಾಟ್ಸಾಪ್ ಆನ್ಲೈನ್ ಟಿಕೆಟ್ ಲಭ್ಯವಿರಲಿದೆ. ಮೃಗಾಲಯ ವೀಕ್ಷಣೆಗೆ ಇನ್ಮೇಲೆ ವಾಟ್ಸಾಪ್ ನಲ್ಲೂ ಟಿಕೆಟ್ ಖರೀದಿಗೆ ಅವಕಾಶವಿರಲಿದೆ.

ಮೃಗಾಲಯದಲ್ಲಿ ಪ್ರಾಣಿ ಪಕ್ಷಿ ವೀಕ್ಷಣೆ ಮಾಡಿ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಮೃಗಾಲಯಕ್ಕೆ ಆಗಮಿಸುವ ಪ್ರವಾಸಿಗರು ಕ್ಯೂನಲ್ಲಿ ನಿಂತು ಕಿರಿ ಕಿರಿ ಅನುಭವಿಸುತ್ತಿದ್ದರು. ಹೀಗಾಗಿ ವಾಟ್ಸಾಪ್ ಆನ್ಲೈನ್ ಟಿಕೆಟ್ ಉದ್ಘಾಟನೆ ಮಾಡಿದ್ದೇವೆ. ಮೃಗಾಲಯಕ್ಕೆ ಆಗಮಿಸುವ ಪ್ರವಾಸಿಗರು ಮೊಬೈಲ್ ವಾಟ್ಸಾಪ್ ಮೂಲಕ ಟಿಕೆಟ್ ಪಡೆಯಬಹುದು. ಲೈವ್ ಫೀಡ್ ಕೂಡ ಉದ್ಘಾಟನೆ ಮಾಡಿದ್ದೇವೆ. ಮೃಗಾಲಯದಲ್ಲಿನ ಹಾವುಗಳಿಗೆ ಹೊರಗಿನಿಂದ ಆಹಾರ ತರಲಾಗುತ್ತಿತ್ತು. ಈಗ ನಮ್ಮಲ್ಲಿಯೇ ಮೊಲ, ಇಲಿ ಸಂತತಿ ಹೆಚ್ಚಳಕ್ಕೆ ಮುಂದಾಗಿದ್ದೇವೆ. ಇದರ ಜೊತೆ ಮೃಗಾಲಯದ ಅಭಿವೃದ್ಧಿಗೂ ನಾವು ಸಿದ್ದರಿದ್ದೇವೆ ಎಂದರು.

ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ವಿಚಾರ ಕುರಿತು ಪ್ರತಿಕ್ರಿಯಿಸಿದ ಈಶ್ವರ್ ಖಂಡ್ರೆ, ರೋಪ್ ವೇ ನಿರ್ಮಾಣ ವಿಚಾರದಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಪರಿಸರ ಸಂರಕ್ಷಣೆ ಜೊತೆ ಅಭಿವೃದ್ಧಿ ಸಹ ಆಗಬೇಕು ಎಂದರು.

ನಟ ದರ್ಶನ್ ಅರಣ್ಯ ಇಲಾಖೆ ರಾಯಭಾರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಈಶ್ವರ್ ಖಂಡ್ರೆ, ನಮ್ಮ ಇಲಾಖೆಯಲ್ಲಿ ಯಾರು ರಾಯಭಾರಿಗಳು ಇಲ್ಲ ಎಂದರು.

Key words: Mysore Zoo-Minister-Ishwar khandre- 'WhatsApp- Online- Ticket

Tags :
Mysore Zoo-Minister-Ishwar khandre- 'WhatsApp- Onlineticket
Next Article