HomeBreaking NewsLatest NewsPoliticsSportsCrimeCinema

ನಾಗಮಂಗಲ ಗಲಭೆಯಲ್ಲಿ ಬೈಕ್, ಅಂಗಡಿಗಳಿಗೆ ಹಾನಿ: ಪರಿಹಾರ ನೀಡುವ ಕುರಿತು ಕ್ರಮ-ಸಚಿವ ಚಲುವರಾಯಸ್ವಾಮಿ

12:05 PM Sep 12, 2024 IST | prashanth

ಮಂಡ್ಯ,ಸೆಪ್ಟಂಬರ್,12,2024 (www.justkannada.in): ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆಯಲ್ಲಿ ಬೈಕ್, ಅಂಗಡಿಗಳಿಗೆ ಹಾನಿಯಾಗಿದ್ದು ಪರಿಹಾರ ನೀಡುವ ಕುರಿತು ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ಗಲಭೆ ನಡೆದ ಘಟನಾಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಸದ್ಯ ಪರಿಸ್ಥಿತಿ ಹತೋಟಿಗೆ ಬಂದಿದೆ ಸಾರ್ವಜನಿಕರು ಯಾರೂ ಆತಂಕಪಡುವ ಅಗತ್ಯವಿಲ್ಲ. ಘಟನೆಯಲ್ಲಿ 20 ಅಂಗಡಿಗಳಿಗೆ ಹಾನಿಯಾಗಿದೆ.  ರಾತ್ರಿಯೇ ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡಿದ್ದೇನೆ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದರು.

ಮುಂದೆ ಈ ರೀತಿ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತದೆ. ಗಲಾಟೆ ವೇಳೆ ಬೈಕ್ ಅಂಗಡಿಗೆ ಹಾನಿಯಾಗಿದ್ದು ಪರಿಹಾರ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡುತ್ತೇನೆ ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳುವ ಕೆಲಸ  ಮಾಡಲಾಗುತ್ತದೆ. ಈ  ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಸಚಿವ ಚಲುವರಾಯಸ್ವಾಮಿ ಮನವಿ ಮಾಡಿದರು.

Key words: Nagamangala riot, case, Action, Minister, Chaluvarayaswamy

Tags :
actioncaseChaluvarayaswamy.ministerNagamangala riot
Next Article