HomeBreaking NewsLatest NewsPoliticsSportsCrimeCinema

ಬಂಧಿತರಾಗಿರುವ ಅಮಾಯಕರ ಹೆಸರನ್ನ ಚಾರ್ಜ್ ಶೀಟ್ ವೇಳೆ ಕೈ ಬಿಡಲು ಸೂಚನೆ- ಸಚಿವ ಚಲುವರಾಯಸ್ವಾಮಿ

06:28 PM Sep 14, 2024 IST | prashanth

ಮಂಡ್ಯ, ಸೆಪ್ಟೆಂಬರ್ 14,2024 (www.justkannada.in):   ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆ ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಿರುವುದು‌ ನಿಜ. ಆದರೆ ಚಾರ್ಜ್​ಶೀಟ್​​ ಸಲ್ಲಿಸುವ ವೇಳೆ ‌ಅವರ ಹೆಸರು ಕೈಬಿಡಲು ಸೂಚನೆ ‌ನೀಡಿದ್ದೇನೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ  ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಈ ಘಟನೆಗೆ ಕಾರಣರಾದವರನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು. ಈಗಾಗಲೇ ಎಫ್ ಐಆರ್ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಒಂದು ಬಾರಿ ಅರೆಸ್ಟ್ ಆದರೆ ಜಾಮೀನು ಪಡೆಯಲೇಬೇಕು. ಅಮಾಯಕರೆಂದು ಖಚಿತವಾದರೆ ಜಾರ್ಜ್‌ಶೀಟ್ ವೇಳೆ ಕೈಬಿಡುತ್ತೇವೆ ಎಂದು ತಿಳಿಸಿದರು.

ಹಾಗೆಯೇ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ ಚಲುವರಾಯಸ್ವಾಮಿ,  ಚನ್ನಪಟ್ಟಣ ಎಲೆಕ್ಷನ್ ಬಗ್ಗೆ ಯಾಕೆ ಮಾತನಾಡಬೇಕು.  ಮಾಜಿ ಸಿಎಂ ಆದವರು ಆಡುವ ಮಾತಾ ಇದು.  ಜನರಿಗೆ ಸಮಾಧಾನ ಹೇಳುವ ಬದಲು ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಸಿಎಂ ಸಿದ್ದರಾಮಯ್ಯರನ್ನ ಕೆಳಗಿಳಿಸಲು ಕಾಂಗ್ರೆಸ್ ನ ಒಂದು ಟೀಂ ಆ್ಯಕ್ಟಿವ್ ಆಗಿದೆ ಎಂಬ ಹೇಳಿಕೆ ಕುರಿತು ಮಾತನಾಡಿದ ಚಲುವರಾಯಸ್ವಾಮಿ,  ವಿಜಯೇಂದ್ರ, ಆರ್.ಅಶೋಕ್ ರನ್ನು  ಬಿಜೆಪಿಯ ಎಷ್ಟು ಜನರು ಒಪ್ಪಿದ್ದಾರೆ. ಜೆಡಿಎಸ್ ನ  ಹೆಚ್.ಡಿ ಕುಮಾರಸ್ವಾಮಿಯನ್ನ ಬಿಜೆಪಿ ಎಷ್ಟು ನಾಯಕರು ಒಪ್ಪಿದ್ದಾರೆ ಎಂದು ಪ್ರಶ್ನಿಸಿದರು.

ಒಂದು ಮನೆ ಪಕ್ಷದ  ಅಂದ ಮೇಲೆ ನಾಲ್ಕೈದು  ವ್ಯತ್ಯಸಗಳು ಇರುತ್ತೆ.  ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಒಟ್ಟಿಗೆ ಇರುವುದನ್ನ ನೋಡಿಲ್ವಾ?  6 ವರ್ಷ ಏನಾದ್ರೂ ವ್ಯತ್ಯಾಸ ಕಂಡು ಬಂತಾ ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದರು.

Key words: Nagamangala, roit case, Minister, Chaluvarayaswamy

Tags :
Chaluvarayaswamy.ministerNagamangalaroit case
Next Article