For the best experience, open
https://m.justkannada.in
on your mobile browser.

JUST ಮೈಸೂರಲ್ಲಿ: ನಂದಿನಿ ರಾಗಿ ಅಂಬಲಿ, ಪ್ರೋಬಯಾಟಿಕ್‌ ಮಜ್ಜಿಗೆ

01:18 PM Apr 11, 2024 IST | mahesh
just ಮೈಸೂರಲ್ಲಿ  ನಂದಿನಿ ರಾಗಿ ಅಂಬಲಿ  ಪ್ರೋಬಯಾಟಿಕ್‌ ಮಜ್ಜಿಗೆ

ಮೈಸೂರು ಏ.11, 2024  : (www.justkannada.in news ) ಮೈಸೂರು ಹಾಲು ಉತ್ಪಾದಕರ ಒಕ್ಕೂಟ( Mymul) ಈ ಬಾರಿಯ ಬೇಸಿಗೆಗೆ ವಿಭಿನ್ನ ಹಾಗೂ ಆರೋಗ್ಯಪೂರ್ಣ ಉತ್ಪನ್ನಗಳಾದ ರಾಗಿ ಅಂಬಲಿ ಹಾಗೂ ಪ್ರೊ ಬಯಾಟಿಕ್‌ ಮಜ್ಜಿಗೆಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಬಿಡುಗಡೆಯಾದ ವಾರದೊಳಗೆ ಎರಡಕ್ಕೂ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ವ್ಯಕ್ತವಾಗಿದೆ. ಇವುಗಳನ್ನು ಮುಂದುವರೆಸುವ ಜತೆಗೆ ಉತ್ಪಾದನೆ ಪ್ರಮಾಣ ಅಧಿಕಗೊಳಿಸಲು ಮೈಮುಲ್‌ ಯೋಜನೆ ರೂಪಿಸುತ್ತಿದೆ

ಏಪ್ರಿಲ್‌ ಮೊದಲ ವಾರದಿಂದಲೇ ರಾಗಿ ಅಂಬಲಿ ಹಾಗೂ ಪ್ರೋ ಬಯಾಟಿಕ್‌ ಮಜ್ಜಿಗೆಯನ್ನು ಹೊರ ತರಲಾಗಿದೆ. ರಾಗಿ ಅಂಬಲಿ ಮನೆಯಲ್ಲಿ ಸಾಮಾನ್ಯವಾಗಿ ತಯಾರಿಸುವ ಪೇಯ. ಬಹುತೇಕರು ರಾಗಿಯನ್ನು ಅಂಬಲಿ ರೂಪದಲ್ಲಿ ಮಾಡಿ ಕುಡಿಯುವುದುಂಟು. ಇದನ್ನೇ ಆರೋಗ್ಯಕರವಾಗಿ ರೂಪಿಸುವ ಉದ್ದೇಶದಿಂದ ಹುರಿದ ರಾಗಿ ಹಿಟ್ಟಿಗೆ ಮಜ್ಜಿಗೆ ಹಾಗೂ ಜೀರಿಗೆಯನ್ನು ಸೇರಿಸಿ ರುಚಿಕರವಾಗಿ ಅಂಬಲಿ ರೂಪಿಸಲಾಗಿದೆ.  200 ಎಂಎಲ್‌ ನ ಪ್ಯಾಕ್‌ ನ ದರ 10 ರೂ.

ನಾವೇ ರೈತರಿಂದ ರಾಗಿ ಖರೀದಿಸಿ ಅದನ್ನು ಪುಡಿ ಮಾಡಲು ಬೇಕಾದ ಯಂತ್ರಗಳನ್ನು ಹಾಕಿದ್ದೇವೆ. ಅಂಬಲಿ, ಮಜ್ಜಿಗೆ , ಜೀರಿಗೆ ಸೇರಿಸಿ ಪ್ಯಾಕೇಟ್‌ ಅನ್ನು ಸಿದ್ದಪಡಿಸುತ್ತೇವೆ. ಇದು ದೇಹದ ಉಷ್ಣಾಂಶ ನಿಯಂತ್ರಿಸಲು ಉತ್ತಮ ರಾಮಬಾಣ. ಸದ್ಯ ಒಂದು ಸಾವಿರ ಲೀಟರ್‌ ರಾಗಿ ಅಂಬಲಿ ತಯಾರಿಸುತ್ತಿದ್ದು, ಬೇಡಿಕೆಯಿದೆ. ಇದನ್ನು ನೋಡಿಕೊಂಡು ಮುಂದೆಯೂ ರಾಗಿ ಅಂಬಲಿ ಪ್ಯಾಕೇಟ್‌ ಅನ್ನು ದೊಡ್ಡದು ಮಾಡುವ ಯೋಚನೆಯಿದೆ. ಇತರೆ ರುಚಿಗಳಲ್ಲೂ ರಾಗಿ ಅಂಬಲಿ ಹೊರ ತರಲಾಗುತ್ತದೆ ಎನ್ನುವುದು ಮೈಸೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿಜಯಕುಮಾರ್‌ ಹೇಳುತ್ತಾರೆ.

ಇನ್ನು ಪ್ರೋಬಯಾಟಿಕ್‌ ಮಜ್ಜಿಗೆಯೂ ಮೈಸೂರು ಡೇರಿಯ ಹೊಸ ಉತ್ಪನ್ನವೇ. ಇದರಲ್ಲಿ ಔಷಧೀಯ ಗುಣ ಇರುವ ಕೆಲವು ಉತ್ಪನ್ನಗಳನ್ನು ಮಜ್ಜಿಗೆಯೊಂದಿಗೆ ಸೇರಿಸಲಾಗಿದೆ. ಇದು ರುಚಿಕರವೂ ಆಗಿದೆ. ಜತೆಗೆ ಕರುಳಿಗೆ ಸಂಬಂಧಿಸಿ ಏನದರೂ ಸಮಸ್ಯೆ ಇದ್ದರೆ ಅದನ್ನು ಸರಿಪಡಿಸುತ್ತದೆ. ಹೊಟ್ಟೆಯೊಳಗಿನ ಪಚನ ಕ್ರಿಯೆಯನ್ನು ಪ್ರೋ ಬಯಾಟಿಕ್‌ ಮಜ್ಜಿಗೆ ಮಾಡಲಿದೆ. ಇದರ ಬೆಲೆಯೂ 200 ಎಂಎಲ್‌ ನ ಪ್ಯಾಕ್‌ಗೆ 10 ರೂ.

ಸಿಎಂ ಸಿದ್ದರಾಮಯ್ಯ ನಿಮಗೆ ಫೋನ್‌ ಮಾಡಿದ್ರ..?

ನಾವು ನಂದಿನಿಯ ಹಲವು ಉತ್ಪನ್ನಗಳನ್ನು ಮೊದಲಿನಿಂದಲೂ ಬಳಸುತ್ತಾ ಬರುತ್ತಿದ್ದೇವೆ. ಇದು ರೈತರಿಂದ ರೈತರಿಗಾಗಿ ಇರುವ ಸಹಕಾರ ಸಂಸ್ಥೆಯ ಉತ್ಪನ್ನಗಳು. ಚೆನ್ನಾಗಿಯೂ ಇವೆ. ಈಗ ರಾಗಿ ಅಂಬಲಿ, ಪ್ರೋ ಬಯಾಟಿಕ್‌ ಮಜ್ಜಿಗೆಯೂ ಚೆನ್ನಾಗಿವೆ. ಕುಟುಂಬದವರೆಲ್ಲರೂ ಇದನ್ನು ಬಳಸುತ್ತಿದ್ಧೇವೆ. ಬಹಳ ಚೆನ್ನಾಗಿದೆ. ಇದನ್ನು ರಾಜ್ಯದ ಎಲ್ಲಾ ಡೇರಿಗಳ ಮೂಲಕ ಉತ್ಪಾದಿಸಿ ಜನರಿಗೆ ತಲುಪಿಸಬಹುದು. ಕೊನೆಗೆ ನಮ್ಮ ಆರೋಗ್ಯವೇ ಮುಖ್ಯವಾಗಿರುವ ಇಂತಹ ಉತ್ನನ್ನ ನಮ್ಮನ್ನು ಕಾಪಾಡುತ್ತವೆ ಎಂದು ಮೈಸೂರಿನ ರಮೇಶ್‌ ಚಂದ್ರ ಸಂತಸದಿಂದಲೇ ವಿವರಿಸುತ್ತಾರೆ.

ಕೃಪೆ : ಎಚ್.ಟಿ ಕನ್ನಡ

Key words : Just in Mysore,  Nandini ,  Ragi Ambali, Probiotic Buttermilk

ENGLISH SUMMARY :

The Mysore Milk Producers' Union (MYMUL) has introduced different and healthy products like ragi Ambali and probiotic buttermilk to the market this summer.

Within a week of its launch, both have received good demand in the market. In addition to continuing these, Mymul is also planning to increase production

Ragi Ambali and probiotic buttermilk have been rolled out since the first week of April. Ragi Ambali is a commonly prepared drink at home. Most people make ragi in the form of Ambali and drink it. To make it healthy, add buttermilk and cumin seeds to the roasted ragi flour and make a delicious Ambali.  A pack of 200ml costs Rs 10.

Tags :

.