ನಂಜನಗೂಡು ಬಂದ್ ನಿಂದ ಸ್ಥಳೀಯರಿಗೆ ತೊಂದರೆ: ಸಮಸ್ಯೆ ಬಗೆಹರಿಸಲು ಶಾಂತಿ ಸಭೆ- ಶಾಸಕ ದರ್ಶನ್ ಧ್ರುವನಾರಾಯಣ್.
ಮೈಸೂರು,ಜನವರಿ,3,2024(www.justkannada.in): ಅಂದಕಾಸುರ ಸಂಹಾರ ವೇಳೆ ಶ್ರೀಕಂಠೇಶ್ವರ ವಿಗ್ರಹದ ಮೇಲೆ ನೀರೆರಚಿದ ಪ್ರಕರಣವನ್ನು ಖಂಡಿಸಿ ನಾಳೆ ಮೈಸೂರು ಜಿಲ್ಲೆ ನಂಜನಗೂಡು ಬಂದ್ ಗೆ ಕರೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ದರ್ಶನ್ ಧ್ರುವ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ದರ್ಶನ್ ದ್ರುವನಾರಾಯಣ್, ಎರಡು ಕಡೆಯವರ ನಂಬಿಕೆಗೆ ಧಕ್ಕೆ ಆಗಿದೆ ಅಂತಾ ದೂರು ದಾಖಲಾಗಿದೆ. ಇಂದು ನಂಜನಗೂಡಿನಲ್ಲಿ ಶಾಂತಿ ಸಭೆ ಇದೆ. ಸಭೆಯಲ್ಲಿ ಈ ಸಮಸ್ಯೆ ತೀರ್ಮಾನವಾಗುತ್ತದೆ ಎಂಬ ನಂಬಿಕೆ ಇದೆ. ಇದರಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆ ಇಲ್ಲ. ನಂಜನಗೂಡು ಬಂದ್ ನಿಂದ ಅಲ್ಲಿನ ಸ್ಥಳೀಯ ಜನರಿಗೆ ತೊಂದರೆ ಆಗಲಿದೆ. ಬಂದ್ ಗೆ ಕರೆ ಕೊಟ್ಟ ಜನರು ಇದನ್ನು ಗಮನಿಸಿಲಿ ಎಂದು ತಿಳಿಸಿದ್ದಾರೆ.
ನಾವು ಸಹ ನಂಜುಂಡೇಶ್ವರನಿಗೆ ಭಕ್ತರಾಗಿದ್ದೇವೆ. ಈ ಹಿಂದೆ ಯಾವ ರೀತಿ ಆಚರಣೆ ನಡೆಯುತ್ತಿತ್ತು. ಮೊನ್ನೆ ಯಾವ ರೀತಿ ಆಚರಣೆಯಾಗಿದೆ. ಇದೆಲ್ಲದರ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕಾಗಿದೆ. ನಾವೆಲ್ಲರೂ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಸಂವಿಧಾನವೇ ನಮಗೆ ದೇವರು. ಸಂವಿಧಾನ ಇರುವ ಕಾರಣದಿಂದಲೇ ನಾನು ಶಾಸಕನಾಗಿ ಆಯ್ಕೆಯಾಗಿರುವುದು ಎಂದು ಶಾಸಕ ದರ್ಶನ್ ಧ್ರುವ ನಾರಾಯಣ್ ಹೇಳಿದ್ದಾರೆ.
Key words: Nanjangudu bandh - Peace -meeting -solve problem - MLA -Darshan Dhruvanarayan