For the best experience, open
https://m.justkannada.in
on your mobile browser.

ನಂಜನಗೂಡು ಶ್ರೀಕಂಠೇಶ್ವರ ದೇವಾಲಯದಲ್ಲಿ ಈ ಬಾರಿ 2 ಕೋಟಿ ರೂ.ಗೂ ಹೆಚ್ಚು ಕಾಣಿಕೆ ಸಂಗ್ರಹ.

01:53 PM Dec 16, 2023 IST | prashanth
ನಂಜನಗೂಡು ಶ್ರೀಕಂಠೇಶ್ವರ ದೇವಾಲಯದಲ್ಲಿ ಈ ಬಾರಿ 2 ಕೋಟಿ ರೂ ಗೂ ಹೆಚ್ಚು ಕಾಣಿಕೆ ಸಂಗ್ರಹ

ಮೈಸೂರು,ಡಿಸೆಂಬರ್,16,2023(www.justkannada.in): ನಂಜನಗೂಡು ಶ್ರೀಕಂಠೇಶ್ವರ ದೇವಾಲಯದಲ್ಲಿ ಭಕ್ತರಿಂದ ಬರೋಬ್ಬರಿ 2.14 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದ್ದು ಈ ಮೂಲಕ ನಂಜನಗೂಡು ನಂಜುಂಡೇಶ್ವರ ಕೋಟ್ಯಾಧೀಶನಾಗಿದ್ದಾನೆ.

ಶ್ರೀಕಂಠೇಶ್ವರ ದೇವಾಲಯದ ಹುಂಡಿಗಳ ಎಣಿಕೆ ಕಾರ್ಯ ನಡೆದಿದ್ದು, 2,14,52,984 ರೂಪಾಯಿ ಕಾಣಿಕೆಯಾಗಿ ಬಂದಿದೆ. 98 ಗ್ರಾಂ 600 ಮಿಲಿ ಗ್ರಾಂ ಚಿನ್ನ,  4 ಕೆಜಿ 500 ಗ್ರಾಂ ಬೆಳ್ಳಿ,  190 ವಿದೇಶಿ ಕರೆನ್ಸಿಗಳು ಸಂಗ್ರಹವಾಗಿದೆ.

ಶ್ರೀ ನಂಜುಂಡೇಶ್ವರ ಸ್ವಾಮಿ ಚಿಕ್ಕ ಜಾತ್ರಾ ಮಹೋತ್ಸವ ನಡೆದ ಪರಿಣಾಮ. ಈ ಬಾರಿ ಎರಡು ಕೋಟಿಗೂ ಹೆಚ್ಚು ಕಾಣಿಕೆ ಸಂಗ್ರಹವಾಗಿದೆ. ಹುಂಡಿ ಎಣಿಕೆ ಕಾರ್ಯದಲ್ಲಿ ಸ್ವಸಹಾಯ ಸಂಘದ ಮಹಿಳೆಯರು, ದೇವಾಲಯದ ಸಿಬ್ಬಂದಿ ಭಾಗಿಯಾಗಿದ್ದರು.

Key words: Nanjangudu -Srikantheshwara Temple - collection - 2 crore- rupees

Tags :

.