ನಾರಾಯಣಗೌಡರಿಗೆ ಕಾಂಗ್ರೆಸ್ ಸೇರಲು ಆಸಕ್ತಿ ಇದೆ- ಸಚಿವ ಚಲುವರಾಯಸ್ವಾಮಿ.
04:59 PM Feb 08, 2024 IST | prashanth
ಮಂಡ್ಯ,ಫೆಬ್ರವರಿ,8,2024(www.justkannada.in): ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಾಗಿರುವ ಹಿನ್ನೆಲೆ ಮಾಜಿ ಸಚಿವ ನಾರಾಯಣಗೌಡ ಕಾಂಗ್ರೆಸ್ ಸೇರಲಿದ್ದಾರೆಂಬ ಸುದ್ದಿ ಹರಡಿದ್ದು ಈ ಕುರಿತು ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಚಿವ ಚಲುವರಾಯಸ್ವಾಮಿ, ನಾರಾಯಣಗೌಡರಿಗೆ ಕಾಂಗ್ರೆಸ್ ಸೇರಲು ಆಸಕ್ತಿ ಇದೆ. ನಾರಾಯಣಗೌಡರಿಗೆ ಕಾಂಗ್ರೆಸ್ ಸೇರಲು ಯಾವುದೇ ಕಂಡಿಷನ್ ಹಾಕಿಲ್ಲ. ಬಿಜೆಪಿಯಲ್ಲಿ ನಾರಾಯಣಗೌಡರಿಗೆ ಪ್ರಾಮುಖ್ಯತೆ ಇಲ್ಲ .ಜೆಡಿಎಸ್ ವಾತಾವರಣ ಸರಿಯಿಲ್ಲ ಎಂದು ಬಿಜೆಪಿಗೆ ಹೋದ್ರು. ಈಗ ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಾರೆ. ಹೀಗಿರುವಾಗ ನಾರಾಯಣಗೌಡ ಅವರು ಹೇಗೆ ಬಿಜೆಪಿಯಲ್ಲಿ ಇರ್ತಾರೆ ಎಂದು ಪ್ರಶ್ನಿಸಿದರು.
Key words: Narayana Gowda - interested – joining- Congress - Minister -Chaluvarayaswamy.