For the best experience, open
https://m.justkannada.in
on your mobile browser.

‘ಏಡ್ಸಮ್ಮನ ಜಾತ್ರೆ’ ಖ್ಯಾತಿಯ ಉಪನ್ಯಾಸಕ ಗಿರೀಶ್ ಗೆ ರಾಷ್ಟ್ರ ಪ್ರಶಸ್ತಿ

05:50 PM Sep 05, 2024 IST | prashanth
‘ಏಡ್ಸಮ್ಮನ ಜಾತ್ರೆ’ ಖ್ಯಾತಿಯ ಉಪನ್ಯಾಸಕ ಗಿರೀಶ್ ಗೆ ರಾಷ್ಟ್ರ ಪ್ರಶಸ್ತಿ

ಮೈಸೂರು,ಸೆಪ್ಟಂಬರ್,5,2024 (www.justkannada.in): ಏಡ್ಸಮ್ಮನ ಜಾತ್ರೆಯ ಖ್ಯಾತಿಯ ಮೈಸೂರಿನ ಉಪನ್ಯಾಸಕ ಎಚ್ ಎನ್ ಗಿರೀಶ್  ಅವರಿಗೆ ರಾಷ್ಟ್ರ ಪ್ರಶಸ್ತಿ ದೊರೆತಿದೆ.

ಇಂದು ಶಿಕ್ಷಕರ ದಿನಾಚರಣೆ ಹಿನ್ನೆಲೆ, ಕೇಂದ್ರ ಶಿಕ್ಷಣ ಸಚಿವಾಲಯದಿಂದ ನೀಡುವ 2024 ನೇ ಸಾಲಿನ ರಾಷ್ಟ್ರ ಪ್ರಶಸ್ತಿಗೆ ಮೈಸೂರಿನ ಉಪನ್ಯಾಸಕ ಎಚ್ ಎನ್ ಗಿರೀಶ್ ಗೆ ಭಾಜನರಾಗಿದ್ದಾರೆ.

ಉಪನ್ಯಾಸಕ ಗಿರೀಶ್ ಏಡ್ಸಮ್ಮ ಜಾತ್ರೆಯಂತ ವಿನೂತನ ಜಾಗೃತಿ ಪರಿಕಲ್ಪನೆ ಮೂಡಿಸಿದ್ದರು. ಮೈಸೂರಿನ ವಿಜಯನಗರದ ನಿವಾಸಿಯಾಗಿರುವ ಎಚ್ ಎನ್ ಗಿರೀಶ್, ಸದ್ಯ ಹುಣಸೂರಿನ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಜೀವವಿಜ್ಞಾನ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಪ್ರೌಢಶಾಲೆಯಲ್ಲಿ 17 ವರ್ಷ ಹಾಗೂ ಪಿಯು ಕಾಲೇಜಿನಲ್ಲಿ 13 ವರ್ಷಗಳು ಕಾರ್ಯ ನಿರ್ವಹಣೆ ಮಾಡಿದ್ದಾರೆ

ಈ ಹಿಂದೆ ಉಪನ್ಯಾಸಕ ಗಿರೀಶ್ ಜನರಲ್ಲಿ ಏಡ್ಸ್ ಜಾಗೃತಿಗಾಗಿ ಏಡ್ಸಮ್ಮನ ಜಾತ್ರೆ ನಡೆಸಿ ಈ ಮೂಲಕ ಬಾರಿ ಟೀಕೆಗೆ ಗುರಿಯಾಗಿದ್ದರು. ಇವರು ಏಡ್ಸ್ ರೋಗಿಯಾಗಿರಬಹುದು ಅದಕ್ಕಾಗಿ ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಕೆಲವರು ನಿಂದನೆ ಮಾಡಿದ್ದರು.

ಹಲವು ವಿಚಾರಗಳಲ್ಲಿ ವೈಜ್ಞಾನಿಕ ಜಾಗೃತಿ ಮೂಡಿಸಿದ್ದ ಉಪನ್ಯಾಸಕ ಗಿರೀಶ್ ಅವರು ಇದೀಗ ರಾಷ್ಟ್ರ ಪ್ರಶಸ್ತಿ ಪಡೆದ ರಾಜ್ಯದ ಮೊದಲ ಉಪನ್ಯಾಸಕ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

Key words: National award, Aidsammana Jatre, famous lecturer, Girish

Tags :

.