ಸಾಲ ವಸೂಲಾತಿ ನೆಪದಲ್ಲಿ ರೈತರ ಭೂಮಿ ಕಿತ್ತುಕೊಳ್ಳುವ ಸರ್ಪ್ರೈಸಿ ಕಾಯ್ದೆ ರದ್ದಾಗಲಿ- ಕುರುಬೂರು ಶಾಂತಕುಮಾರ್
ತಿರುಚಿ,ಆಗಸ್ಟ್,27,2024 (www.justkannada.in): ರೈತರ ಕೃಷಿ ಭೂಮಿ ಕಿತ್ತುಕೊಳ್ಳಲು ಕೇಂದ್ರ ಸರ್ಕಾರ ಸಾಲ ವಸೂಲಾತಿಗಾಗಿ ಸರ್ಫೈಸಿ ಕಾಯಿದೆ ಜಾರಿಗೆ ತಂದು ಸಾಲ ಕಟ್ಟದ ರೈತರ ಜಮೀನು ಬ್ಯಾಂಕುಗಳು ವಶಪಡಿಸಿಕೊಳ್ಳುತಿವೆ. ಹೀಗಾಗಿ ಸರ್ಪ್ರೈಸಿ ಕಾಯ್ದೆ ರದ್ದಾಗಲಿ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೆತರ) ಸಂಘಟನೆಯ ದಕ್ಷಿಣ ಭಾರತ ರಾಜ್ಯಗಳ ಸಂಚಾಲಕ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.
ತಮಿಳುನಾಡಿನ ತಿರುಚಿಯಲ್ಲಿ ಇಂದು ನಡೆದ ರಾಷ್ಟ್ರೀಯ ರೈತ ಸಮಾವೇಶದಲ್ಲಿ ಮಾತನಾಡಿದ ಕುರುಬೂರು ಶಾಂತಕುಮಾರ್, ಇಂತಹ ರೈತ ದ್ರೋಹಿ ಕಾನೂನುಗಳ ವಿರುದ್ಧ ಪ್ರಬಲ ಹೋರಾಟ ನಡೆಸಬೇಕಾಗಿದೆ. ಇಲ್ಲದಿದ್ದರೆ ರೈತ ಕುಲವೇ ನಾಶವಾಗುತ್ತದೆ. ಮುಂದಿನ ಅಕ್ಟೋಬರ್ ನಲ್ಲಿ ನಡೆಯುವ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನ ಅಧಿಕಾರದಿಂದ ಕಿತ್ತೊಗೆಯಲು ದೇಶದ ರೈತ ಮುಖಂಡರೆಲ್ಲ ಸೇರಿ ಪಣತೊಡಬೇಕಾಗಿದೆ. ಎಂದು ತಿಳಿಸಿದರು
ಡಾ ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿ, ಬೆಳೆ ವಿಮೆ ಪದ್ಧತಿ ತಿದ್ದುಪಡಿ ಆಗಬೇಕು. 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂಬ ಇತ್ಯಾದಿ ಒತ್ತಾಯಗಳ ಬಗ್ಗೆ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ ಮುಂದಿನ ದಿನಗಳಲ್ಲಿ ಪ್ರಬಲಗೊಳಿಸಲು ಎಲ್ಲಾ ರಾಜ್ಯಗಳ ರೈತ ಮುಖಂಡರು ತೀರ್ಮಾನಿಸಿದರು. ಈ ಸಮಾವೇಶದಲ್ಲಿ ಸಂಯುಕ್ತ ಕಿಸಾನ್ ಮೋರ್ಚ (ರಾಜಕೀಯೆತರ) ಸಂಘಟನೆಯ ಮುಖಂಡರುಗಳಾದ ಲಕ್ವೀನ್ದರ್ ಸಿಂಗ್. ಕೇರಳದ ಕೆ ವಿ ಬಿಜು. ತೆಲಂಗಾಣದ ವೆಂಕಟೇಶ್ವರರಾವ್. ರಾಮನಗೌಡರ್ ಮಾತಾನಾಡಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಿದರು.
ರಾಷ್ಟ್ರೀಯ ರೈತ ಸಮಾವೇಶದಲ್ಲಿ ತಮಿಳುನಾಡು ಕರ್ನಾಟಕ ಆಂಧ್ರಪ್ರದೇಶ್. ತೆಲಂಗಾಣ. ಕೇರಳ. ರಾಜ್ಯಗಳ ಸಹಸ್ರಾರು ರೈತರು ಭಾಗವಹಿಸಿದ್ದರು.
Key words: National, Farmers Conference, land, Kuruburu Shanthakumar