HomeBreaking NewsLatest NewsPoliticsSportsCrimeCinema

ಅಭಿವೃದ್ದಿ ಶಾಂತಿ, ನೆಮ್ಮದಿ ಬೇಕಾ ಅಥವಾ ಪ್ರಚೋಧನಾಕಾರಿ ಮಾತುಗಳು ಬೇಕಾ..? ಸಚಿವ ದಿನೇಶ್ ಗುಂಡೂರಾವ್.

12:05 PM Feb 17, 2024 IST | prashanth

ಮಂಗಳೂರು, ಫೆಬ್ರವರಿ,17,2024(www.justkannada.in):  ಬಿಜೆಪಿಯವರಿಗೆ ಕೇವಲ ಪ್ರಚೋದನೆ ಮಾಡುವುದೇ ಅಭ್ಯಾಸ ಆಗಿದೆ. ಹೀಗಾಗಿ ಅಭಿವೃದ್ಧಿ, ಶಾಂತಿ ನೆಮ್ಮದಿ ಬೇಕಾ ಅಥವಾ ಧರ್ಮ, ಜಾತಿ, ಸ್ವಾರ್ಥದ  ಪ್ರಚೋದನಾಕಾರಿ ಮಾತುಗಳು ಬೇಕಾ  ನಿರ್ಧರಿಸಿಎ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್  ಪ್ರಶ್ನಿಸಿದರು.

 ಮಂಗಳೂರಿನಲ್ಲಿ ಇಂದು  ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಜನರ ಮುಂದೆ ಕೊಟ್ಟಿರುವ ಮಾತು ಉಳಿಸಿಕೊಂಡಿರುವ ಸರ್ಕಾರ ನಮ್ಮದು. ಒಳ್ಳೆಯ ಕೆಲಸ ಮಾಡಲು  ಸಿಎಂ ಮುಂದೆ ಹೆಜ್ಜೆ ಇಡುತ್ತಿದ್ದಾರೆ. ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಪ್ರತಿಪಾದನೆ ಮಾಡುತ್ತಿದ್ದಾರೆ. ಜನರ ವಿಶ್ವಾಸ ಗಳಿಸಲು ನಮ್ಮ ಪ್ರಾಮಾಣಿಕ ಪ್ರಯತ್ನ ಇರುತ್ತದೆ. ಕೊಡಗಿನಲ್ಲಿ ನಾವು ಗೆದ್ದೆ ಇಲ್ಲ ಗೆದ್ದೆ ಇಲ್ಲ ಅಂತಿದ್ದರು. ಮೊನ್ನೆ ಎರಡು ಶಾಸಕ‌ ಸ್ಥಾನಗಳನ್ನು ಗೆದ್ದಿದೇವೆ. ಅದೇ ರೀತಿ ಜ‌ನರ ಮನಸ್ಸನ್ನು ನಾವು ಗೆಲ್ಲಬೇಕು ಎಂದು ತಿಳಿಸಿದರು.

ರಾಜ್ಯ ಬಜೆಟ್​ ಬಗ್ಗೆ ಬಿಜೆಪಿ  ಟೀಕೆ  ಕುರಿತು ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಬಿಜೆಪಿಯವರು ಬಾಯಿ ತೆರೆದರೆ ಬರೀ ಸುಳ್ಳೇ ಹೊರಗೆ ಬರುತ್ತಿದೆ. ಕೇವಲ ಪ್ರಚೋದನೆ ಮಾಡುವುದೇ ಬಿಜೆಪಿಯವರ ಅಭ್ಯಾಸ ಆಗಿದೆ. ಹಿಂದೂಗಳಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿಕೊಂಡೆ ರಾಜಕಾರಣ ಮಾಡುತ್ತಿದೆ. ವಿರೋಧ ಪಕ್ಷದ ನಾಯಕರಾಗಿ ಆರ್.ಅಶೋಕ್ ಟೀಕೆ ಮಾಡುತ್ತಿದ್ದಾರೆ. ಪ್ರತಿಪಕ್ಷಗಳು ಬಜೆಟ್ ಸಂದರ್ಭದಲ್ಲಿ ಆ ರೀತಿ ಹೇಳುವುದು ಸಹಜ. ಗ್ಯಾರಂಟಿ ಜಾರಿ ಬಳಿಕ ಏನೂ ಮಾಡಲು ಆಗಲ್ಲ ಅಂದುಕೊಂಡಿದ್ದರು. ಆದರೆ ಈಗ ಇದೆಲ್ಲ ಮಾಡಿರುವುದು ಬಿಜೆಪಿಯವರಿಗೆ ಆಶ್ಚರ್ಯ ಆಗಿದೆ. ಹೇಗೆ ಪ್ರತಿಕ್ರಿಯೆ ನೀಡಬೇಕು ಅಂತಾ ಬಿಜೆಪಿಯವರಿಗೆ ಗೊತ್ತಾಗುತ್ತಿಲ್ಲ ಎಂದು ಲೇವಡಿ ಮಾಡಿದರು.

Key words: Need -development –peace- tranquility -r provocative words- Minister -Dinesh Gundurao.

Tags :
Need -development –peace- tranquility -r provocative words- Minister -Dinesh Gundurao.
Next Article