For the best experience, open
https://m.justkannada.in
on your mobile browser.

ನೀಟ್ ಪರೀಕ್ಷೆ ಅಕ್ರಮ: ಮರು ಪರೀಕ್ಷೆ ಮತ್ತು ತನಿಖೆಗೆ ಸಿಎಂ ಸಿದ್ದರಾಮಯ್ಯ ಆಗ್ರಹ.

11:23 AM Jun 15, 2024 IST | prashanth
ನೀಟ್ ಪರೀಕ್ಷೆ ಅಕ್ರಮ  ಮರು ಪರೀಕ್ಷೆ ಮತ್ತು ತನಿಖೆಗೆ ಸಿಎಂ ಸಿದ್ದರಾಮಯ್ಯ ಆಗ್ರಹ

ಮೈಸೂರು,ಜೂನ್,15,2024 (www.justkannada.in): 2024ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಮತ್ತು ಮರು ಪರೀಕ್ಷೆಗೆ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ನೀಟ್ ಪರೀಕ್ಷೆ ಅಕ್ರಮದಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಹೀಗಾಗಿ ನೀಟ್ ಮರುಪರೀಕ್ಷೆ ನಡೆಯಬೇಕು .  ಗ್ರೇಶ್ ಮಾರ್ಕ್ಸ್ ಕೊಟ್ಟು ಪಾಸ್ ಮಾಡಿರುವುದು ಸರಿಯಲ್ಲ. ನೀಟ್  ಪರೀಕ್ಷೆ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಪತ್ರ ಬರೆಯಲಾಗುತ್ತದೆ ಎಂದು  ತಿಳಿಸಿದರು.

ಲೇಖಕಿ ಅರುಂಧತಿರಾಯ್ ಹೇಳಿಕೆ ವಿವಾದ ಕುರಿತು  ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ,  ಈ ರೀತಿ ಹೆದರಿಸಿ ಬೆದರಿಸೋದು ಬಿಜೆಪಿ ಸಂಸ್ಕೃತಿ. ಈ ಕಾರಣದಿಂದಲೇ ಬಿಜೆಪಿಗೆ ಸ್ಪಷ್ಟ ಬಹುಮತ ಬಂದಿಲ್ಲ ಎಂದು ಲೇವಡಿ ಮಾಡಿದರು.
ದುರುಹಂಕಾರದಿಂದ ಬಿಜೆಪಿ 240ಕ್ಕೆ ಕುಸಿದಿದೆ ಎಂಬ ಆರ್ ಎಸ್ ಎಸ್ ನಾಯಕರ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಆರ್ ಎಸ್ಎಸ್ ನ ಮುಖವಾಡ. ಇವರು ಏನೇ ಮಾಡಿದರೂ ದಕ್ಷಿಣ ಭಾರತದಲ್ಲಿ ಹೆಚ್ಚು ಸ್ಥಾ‌ನ ಗೆಲ್ಲಲು ಸಾಧ್ಯವಿಲ್ಲ ಎಂದರು.

Ke words: NEET, exam, illegal, CM, Siddaramaiah

Tags :

.