NEET-UG ಫಲಿತಾಂಶ : ಎನ್ಟಿಎಗೆ ಸುಪ್ರೀಂಕೋರ್ಟ್ ನೋಟಿಸ್ .
A bench of Justices Vikram Nath and Ahsanuddin Amanullah issued notice to the NTA and strictly said, "The allegations made have affected the trust of the system" and therefore we need a reply.
ಕೌನ್ಸೆಲಿಂಗ್ ತಡೆಗೆ ನಕಾರ, ಜುಲೈ 8 ಕ್ಕೆ ಮುಂದಿನ ವಿಚಾರಣೆ.
ನವ ದೆಹಲಿ, ಜೂ.11,2024: (www.justkannada.in news ) ಈ ಸಾಲಿನ ಎನ್ಇಇಟಿ-ಯುಜಿ ಫಲಿತಾಂಶದ ಗೊಂದಲಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್ಟಿಎ) ಸುಪ್ರೀಂ ಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠವು ಎನ್ಟಿಎಗೆ ನೋಟಿಸ್ ಜಾರಿ ಮಾಡಿ, " ಕೇಳಿ ಬಂದಿರುವ ಆರೋಪಗಳು ವ್ಯವಸ್ಥೆಯ ನಂಬಿಕೆ ಮೇಲೆ ಪರಿಣಾಮ ಬೀರಿದೆ " , ಆದ್ದರಿಂದ ನಮಗೆ ಉತ್ತರ ಬೇಕುʼ ಎಂದು ಕಟ್ಟುನಿಟ್ಟಾಗಿ ತಿಳಿಸಿತು.
ಪೀಠವು, ಕೋರ್ಟ್ ರಜೆಯ ನಂತರ ಜುಲೈ 8 ರಂದು ಹೆಚ್ಚಿನ ವಿಚಾರಣೆಗೆ ವಿಷಯವನ್ನು ಪಟ್ಟಿ ಮಾಡಿದೆ. ಈ ವಿಷಯಕ್ಕೆ ಸಂಬಂಧಿಸಿದ ಇತರೆ ಅರ್ಜಿಗಳನ್ನು ಸಹ ಮುಖ್ಯ ಅರ್ಜಿಯ ಜತೆಗೆ ಟ್ಯಾಗ್ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸಿತು.
ಈ ಅರ್ಜಿಯನ್ನು ಜೂನ್ 1 ರಂದು ಶಿವಂಗಿ ಮಿಶ್ರಾ ಮತ್ತು ಇತರರು ಫಲಿತಾಂಶ ಘೋಷಣೆಗೂ ಮುನ್ನ ಸಲ್ಲಿಸಿದ್ದರು.
key words: Refusing to stay counselling, next hearing on July 8. NEET, Result, controversy
SUMMARY:
The Supreme Court on Tuesday issued a notice to the National Testing Agency (NTA) in connection with the confusion over this year's NEET-UG result.
A bench of Justices Vikram Nath and Ahsanuddin Amanullah issued notice to the NTA and strictly said, "The allegations made have affected the trust of the system" and therefore we need a reply."