For the best experience, open
https://m.justkannada.in
on your mobile browser.

ನೇಹಾ ಹಿರೇಮಠ ಕೊಲೆ ವೈಯಕ್ತಿಕ ವಿಚಾರವಲ್ಲ, ದೇಶದ ಸಾಮಾಜಿಕ ವಿಚಾರ ಇದೆ-ಮಾಜಿ ಸಿಎಂ ಬಸವರಾಜ ಬೊಮ್ಮಾಯಿ.

04:32 PM Apr 22, 2024 IST | prashanth
ನೇಹಾ ಹಿರೇಮಠ ಕೊಲೆ ವೈಯಕ್ತಿಕ ವಿಚಾರವಲ್ಲ  ದೇಶದ ಸಾಮಾಜಿಕ ವಿಚಾರ ಇದೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಹಾವೇರಿ,ಏಪ್ರಿಲ್,22,2024 (www.justkannada.in):  ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಯ ಹಿಂದೆ ದೊಡ್ಡ ಷಡ್ಯಂತ್ರ ಇದ್ದು, ಇದು ವೈಯಕ್ತಿಕ ವಿಚಾರವಲ್ಲ. ಇದರ ಹಿಂದೆ ದೇಶದ ಸಾಮಾಜಿಕ ವಿಚಾರ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಂದು ಹಾವೇರಿಯಲ್ಲಿ ನೇಹಾ ಹತ್ಯೆ ಖಂಡಿಸಿ ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಸವರಾಜ ಬೊಮ್ಮಾಯಿ,  ನಾವು ಅತ್ಯಂತ ದುಃಖ ಆಘಾತದ ಸಂದರ್ಭದಲ್ಲಿ ಸೇರಿದ್ದೇವೆ.  ಹೆಣ್ಣು ಮಕ್ಕಳು ಮಾತನಾಡಿದ್ದು ಕರಳು  ಕಿತ್ತು ಬರುವಂತಿದೆ. ಅವನು ಹಾಡಹಗಲೆ ಭಯಂಕರ ಕೊಲೆ ಮಾಡಿದ್ದಾನೆ ಎಂದರೆ ಅವನು ಒಬ್ಬನೇ ಇಲ್ಲ. ಇದು ಕೇವಲ ವೈಯಕ್ತಿಕ ವಿಚಾರ ಅಲ್ಲ. ಇದರ ಹಿಂದೆ ದೇಶದ ಸಾಮಾಜಿಕ ವಿಚಾರ ಇದೆ ಎಂದು ಹೇಳಿದರು.

ನಾವು ಅಧಿಕಾರದಲ್ಲಿ ಇದ್ದಾಗ ಚಿಕ್ಕಮಗಳೂರಿನಲ್ಲಿ ಅಮಾಯಕ ಮಹಿಳೆಯ ಮೇಲೆ ಅತ್ಯಾಚಾರ ನಡೆದಾಗ ಅವನನ್ನು ಗಲ್ಲಿಗೇರಿಸುವಂತೆ ಕ್ರಮ ಕೈಗೊಂಡಿದ್ದೇವು. ನೇಹಾ ತಂದೆ ರಾಜ್ಯದ ಪೊಲೀಸರ ಮೇಲೆ ನಂಬಿಕೆ ಇಲ್ಲ ಅಂತ ಹೇಳಿದ್ದಾರೆ. ರಾಜ್ಗ ಸರ್ಕಾರದ ನಡವಳಿಕೆ ಅವರಿಗೆ ಬೇಸರ ತರಿಸಿದೆ. ಈ ಪ್ರಕರಣವನ್ಬು ಸಿಬಿಐಗೆ ಕೊಡಬೇಕು ಎಂದು ಹೆಳಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಿ ನೇಹಾಗೆ ನ್ಯಾಯ ಸಿಗುವವರೆಗೂ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಇದೊಂದೆ ಪ್ರಕರಣ  ಅಲ್ಲ. ಹಾವೇರಿಯಲ್ಲಿ ಅಲ್ಪ ಸಂಖ್ಯಾತರ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದಾಗ ರಾಜ್ಯ ಸರ್ಕಾರ ಅವರನ್ನು ರಕ್ಷಿಸುವ ಕೆಲಸ ಮಾಡಿದ್ದರು. ಆ ಮಹಿಳೆ ಬಹಿರಂಗವಾಗಿ ಹೇಳಿಕೆ ಕೊಟ್ಟ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದರು. ರಾಜ್ಯದಲ್ಲಿ ಒಂದೇ ಕೋಮಿನ ಹೆಣ್ಣು ಮಕ್ಕಳು ಯಾಕೆ ಸಾಯುತ್ತಿದ್ದಾರೆ. ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ ಎಂದರು.

ಪ್ರತಿ ಮನೆಯ ಹೆಣ್ಣು ಮಗಳು ನಮ್ಮ ಮಕ್ಕಳು, ಎಲ್ಲ ಕಡೆ ಹೆಣ್ಣು ಮಕ್ಕಳು ಅವನನ್ನು ಗಲ್ಲಿಗೇರಿಸುವಂತೆ ಆಗ್ರಹಿಸುತ್ತಿದ್ದಾರೆ. ಇದೊಂದು ಅಗ್ನಿಕುಂಡವಾಗಿದೆ. ರಾಜ್ಯ ಸರ್ಕಾರ ಎಚ್ಷೆತ್ತುಕೊಳ್ಳಬೇಕು. ರಾಜ್ಯ ಜಂಗಲ್ ರಾಜ್ ಆಗಿದೆ. ಸಿಎಂ ಒಂದು ಟ್ವೀಟ್ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಅಲ್ಲದೇ ಅವಳ ಬಗ್ಗೆ ಅನಗತ್ಯ ಆರೋಪ ಮಾಡುವ ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ. ಈ ಬಗ್ಗೆಯೂ ತನಿಖೆ ಆಗಬೇಕು‌. ನಾವು ವಿದ್ಯಾರ್ಥಿಗಳ ಹೋರಾಟದ ಜೊತೆಗಿದ್ದೇವೆ. ಈಗ ನಡೆಯುತ್ತಿರುವುದು ಜನ ಶಕ್ತಿ ಮತ್ತು ಅಧಿಕಾರ ಶಕ್ತಿ ನಡುವೆ ನಡೆಯುವ ಹೋರಾಟ. ಜನಶಕ್ತಿಯ ಹೋರಾಟಕ್ಕೆ ಯಾವಾಗಲೂ ಜಯ ಸಿಗುತ್ತದೆ. ಆರೋಪಿಗೆ ತಕ್ಕ ಶಿಕ್ಷೆಯಾಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ENGLISH SUMMARY..

Neha murder incident: Huge protest rally in Haveri

Neha murder case not for individual issue but there is nation's social issue in it: Bommai

Protest won't stop till the accused is hanged: Bommai

Haveri:
Former chief minister and Gadag-Haveri Lok Sabha constituency BJP candidate Basavaraj Bommai said there was a big conspiracy behind the murder of Neha Hiremath, a college student who was stabbed to death in a college campus in Hubballi last week, and said it happened not due to individual reasons but the social issue of the nation has been behind it.

Speaking at a protest rally organised by Akhila Bharathiya Vidyarthi Parishad here on Monday, he said they have assembled here for a sad cause and the speeches of the girl students brought years. The way in which the accused stabbed her to death in broad daylight it shows that he was not alone and not due to personal reasons. A social issue of the country was behind this incident. The previous BJP government had taken steps to hang an accused in brutal rape case in Chikmagalur. Neha's father, Niranjan Hiremath has no confidence in the state police and he has been upset with the government's attitude. The case must be referred to the Central Bureau of Investigation. The BJP would continue its protest till the accused was hanged to death. InBelagavi, a dalit woman has been undressed. If this kind of incident took place while the CM and DGP were in the district and upon questioning they shot back saying law and order has been in place. In Haveri incident, the CM has asked the local MLA to take care of it and that means the victim must not speak. Why women of a particular religion were being killed? There is a big conspiracy behind it. The girl students from every house have demanded that the accused must be hanged to death. This incident was like a fire ball and the government must wake up. The CM washed off his hands just by tweeting about the incident. All kinds of news were being spread in social media and a probe must be ordered in this regard. "We are with the students agitation. What is presently going on is a fight between Jan Shakti and Power Shakti. Ultimately, it's the victory for Jan Shakt".

Key words: Neha, murder, case,  Basavaraja Bommai

Tags :

.