HomeBreaking NewsLatest NewsPoliticsSportsCrimeCinema

ನೆಹರು ಅವರು ಮೀಸಲಾತಿಗೆ ವಿರುದ್ದವಾಗಿದ್ದರು- ಪ್ರಧಾನಿ ಮೋದಿ.

04:11 PM Feb 07, 2024 IST | prashanth

ನವದೆಹಲಿ,ಫೆಬ್ರವರಿ,7,2024(www.justkannada.in): ಜವಾಹರಲಾಲ್ ನೆಹರು ಹಿಂದುಳಿದವರ ಎಲ್ಲಾ ರೀತಿಯ ಮೀಸಲಾತಿಗೆ ವಿರುದ್ಧವಾಗಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇಂದು ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ಯಾವಾಗಲೂ ದಲಿತರು, ಹಿಂದುಳಿದವರು, ಬುಡಕಟ್ಟು ಜನಾಂಗದವರ ವಿರುದ್ಧವಿರುವವರು. ಮೀಸಲಾತಿಯನ್ನು ಜವಾಹರಲಾಲ್ ನೆಹರು ವಿರೋಧಿಸುತ್ತಿದ್ದರು. ಒಬಿಸಿಗಳಿಗೆ ಎಂದಿಗೂ ಸಂಪೂರ್ಣ ಮೀಸಲಾತಿ ನೀಡದ ಕಾಂಗ್ರೆಸ್ ಸಾಮಾಜಿಕ ನ್ಯಾಯವನ್ನು ಬೋಧಿಸಬಾರದು ಎಂದು ವಾಗ್ದಾಳಿ ನಡೆಸಿದರು.

ಒಬಿಸಿಗೆ ಯಾವತ್ತೂ ಸಂಪೂರ್ಣ ಮೀಸಲಾತಿ ನೀಡದ ಕಾಂಗ್ರೆಸ್ ಸಾಮಾನ್ಯ ವರ್ಗದ ಬಡವರಿಗೆ ಮೀಸಲಾತಿ ನೀಡಲಿಲ್ಲ, ಬಾಬಾ ಸಾಹೇಬರನ್ನು ಭಾರತ ರತ್ನಕ್ಕೆ ಅರ್ಹರೆಂದು ಪರಿಗಣಿಸದ ಕಾಂಗ್ರೆಸ್ ತನ್ನ ಕುಟುಂಬಕ್ಕೆ ಮಾತ್ರ ಭಾರತ ರತ್ನ ನೀಡುತ್ತಲೇ ಇದೆ ಎಂದು ಟೀಕಿಸಿದ ಪ್ರಧಾನಿ ಮೋದಿ, ಅಧಿಕಾರದ ದುರಾಸೆಯಿಂದ ಪ್ರಜಾಪ್ರಭುತ್ವವನ್ನು ಬಹಿರಂಗವಾಗಿ ಕಾಂಗ್ರೆಸ್​ ಕತ್ತು ಹಿಸುಕಿದೆ. ಈಗ ದೇಶವನ್ನು ಉತ್ತರ-ದಕ್ಷಿಣ ಎಂದು ಒಡೆಯುವ ಹೇಳಿಕೆಯನ್ನು ನೀಡುತ್ತಿದೆ ಎಂದು ಕಿಡಿಕಾರಿದರು.

Key words: Nehru - against -reservation - PM -Modi.

Tags :
Nehru - against -reservation - PM -Modi.
Next Article