For the best experience, open
https://m.justkannada.in
on your mobile browser.

ಬಿಹಾರದಲ್ಲಿ ವಿಶ್ವಾಸ ಮತ ಗೆದ್ದ ನಿತೀಶ್ ಕುಮಾರ್.

05:07 PM Feb 12, 2024 IST | prashanth
ಬಿಹಾರದಲ್ಲಿ ವಿಶ್ವಾಸ ಮತ ಗೆದ್ದ ನಿತೀಶ್ ಕುಮಾರ್

ಬಿಹಾರ,ಫೆಬ್ರವರಿ,12,2024(www.justkannada.in): ಬಿಹಾರದಲ್ಲಿ ಬಿಜೆಪಿಯು ಹಾಗೂ ಬಿಜೆಪಿ ಮೈತ್ರಿಕೂಟ ಸರ್ಕಾರ ಸದನದಲ್ಲಿ ಇಂದು ವಿಶ್ವಾಸಮತ ಗೆದ್ದಿದೆ. ಭಾರೀ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭೆಯಲ್ಲಿ ನಿತೀಶ್ ಕುಮಾರ್ ಬಹುಮತ ಸಾಬೀತು ಪಡಿಸಿದ್ದಾರೆ.

ಒಟ್ಟು 243 ಸದಸ್ಯಬಲದ ಬಿಹಾರದಲ್ಲಿ ಬಹುಮತಕ್ಕೆ 122 ಸದಸ್ಯರ ಅಗತ್ಯವಿತ್ತು, ಬಿಜೆಪಿ -ಜೆಡಿಯು ಮೈತ್ರಿಕೂಟ 128 ಸದಸ್ಯರನ್ನು ಹೊಂದಿದೆ. ಒಟ್ಟು 129 ಮತಗಳು ವಿಶ್ವಾಸ ಮತ ಪರವಾಗಿ ಚಲಾವಣೆಗೊಂಡಿದೆ.  ಬಿಜೆಪಿಯ 78 ಶಾಸಕರಿದ್ದು ನಿತೀಶ್​ ಕುಮಾರ್ ಅವರ ಸಂಯುಕ್ತ ಜನತಾದಳ 45 ಶಾಸಕರನ್ನು ಹೊಂದಿದೆ. ಜಿತಿನ್ ರಾಮ್ ಮಾಂಜಿ ಹಿಂದೂಸ್ತಾನ್ ಅವಾಮ್ ಮೋರ್ಚಾ 4 ಸ್ಥಾನಗಳನ್ನು ಹೊಂದಿತ್ತು.

ಇನ್ನುಳಿದಂತೆ ಒಬ್ಬ ಪಕ್ಷೇತರ ಈ ಮೈತ್ರಿಕೂಟವನ್ನು ಬೆಂಬಲಿಸಿದ್ದರು. ವಿರೋಧಿ ಕೂಟವಾಗಿರುವ ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್​ 114 ಸ್ಥಾನಗಳನ್ನು ಹೊಂದಿದ್ದವು.

ಬಿಜೆಪಿ ಜೊತೆಗೂಡಿ ನೂತನ ಸರ್ಕಾರ ರಚಿಸಲಿರುವ ನಿತೀಶ್ ಕುಮಾರ್ ಅವರು ವಿಶ್ವಾಸಮತ ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿದ್ದಾರೆ ಎಂದು ಜೆಡಿಯು ವಿಶ್ವಾಸ ವ್ಯಕ್ತಪಡಿಸಿಸಿತ್ತು.

Key words: Nithish Kumar -wins -confidence vote - Bihar

Tags :

.