For the best experience, open
https://m.justkannada.in
on your mobile browser.

ಇಂದು ನೀತಿ ಆಯೋಗ ಸಭೆ: ಕರ್ನಾಟಕ ಸೇರಿ ಹಲವು ರಾಜ್ಯಗಳಿಂದ ಬಹಿಷ್ಕಾರ

11:49 AM Jul 27, 2024 IST | prashanth
ಇಂದು ನೀತಿ ಆಯೋಗ ಸಭೆ  ಕರ್ನಾಟಕ ಸೇರಿ ಹಲವು ರಾಜ್ಯಗಳಿಂದ ಬಹಿಷ್ಕಾರ

ನವದೆಹಲಿ,ಜುಲೈ,27,2024 (www.justkannada.in):  ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಂದು ನೀತಿ ಆಯೋಗದ  ಸಭೆ ನಡೆಯಲಿದ್ದು ಈ ಸಭೆಗೆ ಕರ್ನಾಟಕ ಸೇರಿ ಹಲವು ರಾಜ್ಯಗಳು ಬಹಿಷ್ಕಾರ ಹಾಕಿವೆ.

ಸಭೆಯು 2047ರ ಹೊತ್ತಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಅಜೆಂಡಾ ಹೊಂದಿದೆ. ವಿಕಸಿತ್ ಭಾರತ್ @ 2047 ಪರಿಕಲ್ಪನೆಯಡಿ ಸಭೆಯಲ್ಲಿ ಚರ್ಚೆ ನಡೆಯಲಿದ್ದು,  ರಾಷ್ಟ್ರಪತಿ ಭವನದಲ್ಲಿ ಸಭೆ ನಡೆಯಲಿದೆ.

ಸಭೆಗೆ  ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಿಎಂ ಸೇರಿ,  ಪಂಜಾಬ್ ಜಾರ್ಖಂಡ್ ತಮಿಳುನಾಡು, ದೆಹಲಿ ಕೇರಳ, ಹಿಮಾಚಲ ಪ್ರದೇಶ ಸಿಎಂಗಳು ಗೈರಾಗಲಿದ್ದಾರೆ. ಬಜೆಟ್ ನಲ್ಲಿ ತಾರತಮ್ಯ ಆರೋಪದ ಮೇಲೆ ಸಭೆಗೆ ಗೈರಾಗಲಿದ್ದಾರೆ ಎನ್ನಲಾಗಿದೆ. ಇನ್ನು  ಸಭೆಯಲ್ಲಿ ಎನ್ ಡಿಎ ಮೈತ್ರಿಕೂಟದ ರಾಜ್ಯಗಳ ಸಿಎಂಗಳು ಭಾಗಿಯಾಗಲಿದ್ದಾರೆ. ಇನ್ನು ಪಶ್ಚಿಮ ಬಂಗಾರ ಸಿಎಂ ಮಮತಾ ಬ್ಯಾನರ್ಜಿ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

Key words: Niti Aayog, meeting, Boycott, many states

Tags :

.