For the best experience, open
https://m.justkannada.in
on your mobile browser.

ಈ ಬಾರಿ ಕಳಸ್ತವಾಡಿ ಷಷ್ಠಿ ದೇವಸ್ಥಾನದಲ್ಲಿ ಜಾತ್ರೆ ಇರುವುದಿಲ್ಲ.

11:00 AM Dec 15, 2023 IST | prashanth
ಈ ಬಾರಿ ಕಳಸ್ತವಾಡಿ ಷಷ್ಠಿ ದೇವಸ್ಥಾನದಲ್ಲಿ ಜಾತ್ರೆ ಇರುವುದಿಲ್ಲ

ಮೈಸೂರು,ಡಿಸೆಂಬರ್,15,2023(www.justkannada.in): ಡಿಸೆಂಬರ್ 18ರಂದು ಸುಬ್ರಹ್ಮಣ್ಯ ಷಷ್ಠಿ ಹಬ್ಬದ ಸಂಭ್ರಮವಾಗಿದ್ದು, ಆದರೆ ಈ ಬಾರಿ ಮೈಸೂರು ತಾಲ್ಲೂಕಿನ ಕಳಸ್ತವಾಡಿ ಗ್ರಾಮದಲ್ಲಿನ ಷಷ್ಠಿ ದೇವಾಲಯಯಲ್ಲಿ ಯಾವುದೇ ಜಾತ್ರೆ ಇರುವುದಿಲ್ಲ ಎಂದು ಸಾರ್ವಜನಿಕರಿಗೆ ಮೇಟಗಳ್ಳಿ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಾರಿ ಕಳಸ್ತವಾಡಿಯ ಷಷ್ಠಿ ದೇವಸ್ಥಾನದಲ್ಲಿ ಯಾವುದೇ ರೀತಿಯ ಜಾತ್ರೆ ಇರುವುದಿಲ್ಲ. ಷಷ್ಠಿ ದಿನ ದೇವಸ್ಥಾನದಲ್ಲಿ ಪೂಜೆಯು ಸಹ ಇರುವುದಿಲ್ಲ ಎಂದು ಮೇಟಗಳ್ಳಿ ಠಾಣಾ ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

ಸುತ್ತಮುತ್ತಲಿನ ಜನ ಆಗಮಿಸುವುದರಿಂದ ಮುಂಚಿತವಾಗಿ ಮೇಟಗಳ್ಳಿ ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಪ್ರತಿ ಬಾರಿ ಇಲ್ಲಿ ಷಷ್ಠಿಯಂದು ನೂರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಿದ್ದರು.

Key words: no fair –mysore-Kalastwadi- Shashti Temple.

Tags :

.