For the best experience, open
https://m.justkannada.in
on your mobile browser.

ಸಿಎಂ ತವರಿನ ದೊಡ್ಡ ಆಸ್ಪತ್ರೆಯಲ್ಲೆ ವೀಲ್ ಚೇರ್ ಇಲ್ಲ..?!: ಡೀನ್‌ ಗೆ ತರಾಟೆ ತೆಗೆದುಕೊಂಡ ಕೈ ಶಾಸಕ.

02:20 PM Aug 13, 2024 IST | mahesh
ಸಿಎಂ ತವರಿನ ದೊಡ್ಡ ಆಸ್ಪತ್ರೆಯಲ್ಲೆ ವೀಲ್ ಚೇರ್ ಇಲ್ಲ      ಡೀನ್‌ ಗೆ ತರಾಟೆ ತೆಗೆದುಕೊಂಡ ಕೈ ಶಾಸಕ

Patients without wheelchairs at the prestigious K.R. Hospital in Mysuru.  hospital that has completed a century. The hospital has already received a grant of Rs 100 crore. But there is no minimum infrastructure.  A wheelchair was locked and tied up by the hospital staff. Finally, the relatives took the elderly patient in a plastic chair.

ಮೈಸೂರು, ಆ.13,2024: (www.justkannada.in news) ಮೈಸೂರಿನ ಪ್ರತಿಷ್ಠಿತ ಕೆ.ಆರ್.ಆಸ್ಪತ್ರೆಯಲ್ಲಿ ವೀಲ್ ಚೇರ್ ಇಲ್ಲದೆ ರೋಗಿಗಳ ಪರದಾಟ. ಶತಮಾನ ಪೂರೈಸಿರುವ ದೊಡ್ಡ ಆಸ್ಪತ್ರೆ.

ಈಗಾಗಲೇ ಆಸ್ಪತ್ರೆಗೆ ನೂರು ಕೋಟಿ ಅನುದಾನ ಕೂಡ ಬಂದಿದೆ. ಆದರು ಕನಿಷ್ಠ ಮೂಲಭೂತ ಸೌಕರ್ಯವು ಇಲ್ಲ.  ಇದ್ದೊಂದು ವೀಲ್ ಚೇರ್ ಗೆ ಬೀಗ ಹಾಕಿ ಕಟ್ಟಿಹಾಕಿರುವ  ಆಸ್ಪತ್ರೆ ಸಿಬ್ಬಂದಿಗಳು. ಕಡೆಗೆ ಪ್ಲಾಸ್ಟಿಕ್ ಚೇರ್ ನಲ್ಲಿ ವೃದ್ಧ ರೋಗಿಯನ್ನ ಕರೆದೊಯ್ದ ಸಂಬಂಧಿಗಳು.

ನಾಲ್ಕು ಜಿಲ್ಲೆಗಳಿಗೆ ಪ್ರತಿಷ್ಠಿತ ಆಸ್ಪತ್ರೆಯಾಗಿರುವ ಕೆ.ಆರ್.ಆಸ್ಪತ್ರೆ. ಇದೀಗ ಆಸ್ಪತ್ರೆಗೆ ಬೇಕಾಗಿದೆ ಚಿಕಿತ್ಸೆ.

ಶಾಸಕ ತರಾಟೆ:

ಪ್ಲಾಸ್ಟಿಕ್ ಚೇರ್ ನಲ್ಲಿ ವಯೋವೃದ್ಧೆ ಹೊತ್ತೊಯ್ದ ಪ್ರಕರಣ. ಕೆ.ಆರ್‌‌. ಆಸ್ಪತ್ರೆ ಡೀನ್ ದಾಕ್ಷಾಯಿಣಿಗೆ ಕ್ಲಾಸ್ ತಗೆದುಕೊಂಡ ಚಾಮರಾಜ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌  ಶಾಸಕ ಹರೀಶ್ ಗೌಡ.

ಪ್ರತಿದಿನ ರೌಂಡ್ಸ್ ಮಾಡ್ತೀನಿ ಅಂತೀರಾ ಏನ್ ಇದು ಕಥೆ‌. ಪ್ರತಿ ದಿನ ಪೋನ್ ಮಾಡಿದ್ರೆ ರೌಂಡ್ಸ್ ಅಂತೀರಾ ಎಂದು ತರಾಟೆ. ಈ ಬಗ್ಗೆ ನನ್ನ ಪ್ರಶ್ನೆ ಮಾಡಿದ್ರೆ ನಿಮ್ಮದೇ ನಿರ್ಲಕ್ಷ್ಯ ಅಂತಾ ಹೇಳ್ತೀನಿ ನೀವೆ ಉತ್ತರ ಕೊಡಿ ಎಂದ ಶಾಸಕ ಹರೀಶ್‌ ಗೌಡ.

ಇದು ಸಿಎಂ ತವರು ಜಿಲ್ಲೆ, ನೀವು ಉಸ್ತುವಾರಿ ನಿಭಾಯಿಸಬೇಕು. ಪೋನ್ ಮೂಲಕವೇ ದಾಕ್ಷಾಯಿಣಿಗೆ ಕ್ಲಾಸ್ ತಗೆದುಕೊಂಡ ಶಾಸಕ ಕೆ.ಹರೀಶ್ ಗೌಡ.

key words: No wheelchair ,K.R.hospital, Congress MLA, slams, Dean

SUMMARY:

Tags :

.