ಗ್ಯಾರಂಟಿ ಯೋಜನೆಯಿಂದಲ್ಲ, ಇವರ ಲೂಟಿ ದಾಹಕ್ಕೆ ಖಜಾನೆ ಖಾಲಿ- ಮಾಜಿ ಸಿಎಂ ಹೆಚ್.ಡಿಕೆ ವಾಗ್ದಾಳಿ.
ಬೆಂಗಳೂರು,ಫೆಬ್ರವರಿ,23,2024(www.justkannada.in): ಗ್ಯಾರಂಟಿ ಯೋಜನೆಯಿಂದ ಸರ್ಕಾರದ ಖಜಾನೆ ಖಾಲಿಯಾಗಿಲ್ಲ. ಇವರು ಲೂಟಿ ಹೊಡೆದು ಖಜಾನೆ ಖಾಲಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಇಂದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಅಮ್ಮ ತಾತಿ ಎಂದು ಬೇಡುವ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ದಹನೀಯ ಸ್ಥಿತಿಗೆ ತಂದಿಟ್ಟಿದ್ದಾರೆ ಏತಕ್ಕೆ ತಂದು ಕೊಂಡಿದ್ದಿರಾ ಇಂತಹ ಪರಿಸ್ಥಿತಿಯನ್ನ. ಇವರು ಭಿಕ್ಷುಕರ ಸರ್ಕಾರ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯದ ಬೊಕ್ಕಸ ಖಾಲಿಯಾಗಿಲ್ಲ, ಸ್ವಂತ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ನಮ್ಮದು ಒಂದು ಸಂಪದ್ಭರಿತ ರಾಜ್ಯ, ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸ ಖಾಲಿಯಾಗಲಾರದು, ಇವರು ಲೂಟಿ ಹೊಡೆದು ಖಜಾನೆ ಖಾಲಿ ಮಾಡಿದ್ದಾರೆ, ಸರ್ಕಾರದ ಸ್ವೇಚ್ಛಾಚಾರದಿಂದಾಗಿ ಅದು ಬರಿದಾಗಿದೆ. ಕೇಂದ್ರದ ವಿರುದ್ದ ನಿರ್ಣಯ ಮಂಡಿಸಿದ್ದೀರಿ ನಿಮಗೆ ನಾಚಿಕೆಯಾಗಬೇಕು ಎಂದು ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ದ ಹೆಚ್.ಡಿಕೆ ಗುಡುಗಿದರು.
Key words: Not guarantee scheme-treasury - empty – loot-Former CM- HD Kumaraswamy