ಪ್ರಜ್ವಲ್ ರೇವಣ್ಣ ಮತ್ತು ಹೆಚ್ ಡಿ ರೇವಣ್ಣಗೆ ಎಸ್ ಐಟಿ ಮತ್ತೊಂದು ನೋಟಿಸ್.
11:15 AM May 03, 2024 IST
|
prashanth
Tags :
ಬೆಂಗಳೂರು ,ಮೇ,3,2024 (www.justkannada.in): ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ಹೆಚ್ ಡಿ ರೇವಣ್ಣಗೆ ಎಸ್ ಐಟಿ ಮತ್ತೊಂದು ನೋಟಿಸ್ ನೀಡಲು ಮುಂದಾಗಿದೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಪ್ರಕರಣ ಸಂಬಂಧ 24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗುತ್ತಿದೆ. ಹಾಜರಾಗದಿದ್ದರೇ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಲುಕ್ ಔಟ್ ನೋಟಿಸ್ ಕೂಡ ಕೊಟ್ಟಿದ್ದೇವೆ ಎಂದಿದ್ದಾರೆ.
ನೋಟಿಸ್ ನೀಡಲು ಹೊಳೇನರಸಿಪುರಕ್ಕೆ ಎಸ್ ಐಟಿ ತೆರಳಿದೆ ಎನ್ನಲಾಗಿದೆ.
Key words: notice, Prajwal Revanna, HD Revanna
Next Article