For the best experience, open
https://m.justkannada.in
on your mobile browser.

ಏಕದಿನ ವಿಶ್ವಕಪ್ 2ನೇ ಸೆಮಿಫೈನಲ್: ಆಸ್ಟ್ರೇಲಿಯಾ ವಿರುದ್ದ ಟಾಸ್ ಗೆದ್ದ ದಕ್ಷಿಣ ಆಫ‍್ರಿಕಾ ಬ್ಯಾಟಿಂಗ್ ಆಯ್ಕೆ.

02:00 PM Nov 16, 2023 IST | prashanth
ಏಕದಿನ ವಿಶ್ವಕಪ್ 2ನೇ ಸೆಮಿಫೈನಲ್  ಆಸ್ಟ್ರೇಲಿಯಾ ವಿರುದ್ದ ಟಾಸ್ ಗೆದ್ದ ದಕ್ಷಿಣ ಆಫ‍್ರಿಕಾ ಬ್ಯಾಟಿಂಗ್ ಆಯ್ಕೆ

ಕೋಲ್ಕತ್ತಾ,ನವೆಂಬರ್,16,2023(www.justkannada.in):  ಏಕದಿನ ವಿಶ್ವಕಪ್ 2ನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಸೆಣೆಸಾಡುತ್ತಿದ್ದು ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ದುಕೊಂಡಿದೆ.

ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ 2ನೇ ಸೆಮಿಫೈನಲ್ ಪಂದ್ಯ ನಡೆಯುತ್ತಿದ್ದು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ‍್ರಿಕಾದ ಫೈನಲ್ ಪ್ರವೇಶ ಭವಿಷ್ಯ ಇಂದು ನಿರ್ಧಾರವಾಗಲಿದೆ. ಈಗಾಗಲೇ ಮೊದಲ ಸೆಮಿಫೈನಲ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ದ ಟೀಂ ಇಂಡಿಯಾ  ಭರ್ಜರಿ ಜಯ ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿದ್ದು ಇಂದು ನಡೆಯುವ 2ನೇ ಸೆಮಿಫೈನಲ್ ನಲ್ಲಿ ಗೆಲ್ಲುವ ತಂಡ ನವೆಂಬರ್ 19 ರಂದು ನಡೆಯುವ ಫೈನಲ್ ನಲ್ಲಿ  ಭಾರತ ವಿರುದ್ದ ಸೆಣೆಸಾಡಲಿದೆ.

ತಂಡಗಳು ಹೀಗಿದೆ.

ದಕ್ಷಿಣ ಆಫ್ರಿಕಾ.

ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ಜೆರಾಲ್ಡ್ ಕೊಯೆಟ್ಜಿ, ಕಗಿಸೊ ರಬಾಡ, ತಬ್ರೇಝ್ ಶಮ್ಸಿ.

ಆಸ್ಟ್ರೇಲಿಯಾ..

ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪಾ, ಜೋಶ್ ಹ್ಯಾಝಲ್‌ವುಡ್.

Key words: ODI World Cup -2nd semi-final- South Africa -win - toss - elect - bat -Australia.

Tags :

.