HomeBreaking NewsLatest NewsPoliticsSportsCrimeCinema

ಎಸ್.ಟಿ ನಿಗಮ ಅಧಿಕಾರಿ ಆತ್ಮಹತ್ಯೆ ಕೇಸ್: ಸಿಎಂ ತಮ್ಮ ನಿಲುವು ಸ್ಪಷ್ಟಪಡಿಸಲಿ-ಬಸವರಾಜ ಬೊಮ್ಮಾಯಿ.

06:32 PM May 30, 2024 IST | prashanth

ವಿಜಯನಗರ,ಮೇ,30,2024 (www.justkannada.in):  ಎಸ್ ಟಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ತಮ್ಮ ನಿಲುವು ಸ್ಪಷ್ಟಪಡಿಸಲಿ ಎಂದು  ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಹಿಂದೆ ನಮ್ಮ  ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರ  ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ  ಕೆಎಸ್ ಈಶ್ವರಪ್ಪ ಅವರದ್ದು ತಪ್ಪಿರಲಿಲ್ಲ ಆದರೂ, ಈಶ್ವರಪ್ಪ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಅಂದು ಭಾರಿ ಟೀಕೆ ಮಾಡಿದ್ದ ಸಿಎಂ ಸಿದ್ದರಾಮಯ್ಯ ಈಗ ಏಕೆ ಸುಮ್ಮನಿದ್ದಾರೆ.  ಈಗ ಅವರೇ ಸಿಎಂ, ಅವರ ಸಚಿವ ಸಂಪುಟದ ಸಚಿವರ ವ್ಯಾಪ್ತಿಯ ವಾಲ್ಮೀಕಿ ನಿಗಮದ ಹಣ ಲೂಟಿ ಆಗಿದೆ. ಆತ್ಮಹತ್ಯೆ ಮಾಡಿಕೊಂಡ ನಿಗಮದ ಅಧಿಕಾರಿ ಡೆತ್ ನೋಟ್ ನಲ್ಲಿ ಎರಡು ಬಾರಿ ಸಚಿವ ನಾಗೇಂದ್ರ ಅವರ ಮೌಖಿಕ ಆದೇಶ ಇತ್ತು ಎಂದು ಉಲ್ಲೇಖ ಮಾಡಿದ್ದಾರೆ. ಆದರೆ ಸಚಿವ ನಾಗೇಂದ್ರ  ರಾಜೀನಾಮೆ ತೆಗೆದುಕೊಂಡಿಲ್ಲ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಈ ರೀತಿಯಲ್ಲಿ ಘಟನೆಗಳು ಆಗಿವೆ, ಆಗಿಲ್ಲಾ ಅಂತ ನಾನು ಹೇಳುವುದಿಲ್ಲ. ಆದರೆ, ಹಿಂದಿನವರು ಏನು ಪಾಲನೆ ಮಾಡಿದ್ದರು, ಅದನ್ನು ಈಗಿನ ಸರ್ಕಾರವೂ ಮಾಡಬೇಕು. ಆದರೆ, ಇದೊಂದು ಭಂಡ ಸರ್ಕಾರ ಎಂದು  ಬಸವರಾಜ ಬೊಮ್ಮಾಯಿ ಹರಿಹಾಯ್ದರು.

ಪ್ರಕರಣದಲ್ಲಿ ಸಚಿವ ನಾಗೇಂದ್ರ ರಾಜೀನಾಮೆ ಕೊಡಬೇಕು.  ಸಿಬಿಐ ತನಿಖೆಗೆ ಒಳಪಡಿಸಿ ಎಲ್ಲಾ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು, ಹಣ ವಾಪಾಸ್ ಬರಬೇಕು ಎಂದು ಬೊಮ್ಮಾಯಿ ಆಗ್ರಹಿಸಿದರು.

Key words: Officer, Suicide Case, CM, clarify, Basavaraja Bommai

Tags :
Basavaraja BommaiST -Corporation-Officer-Suicide Case-CM -clarify
Next Article