HomeBreaking NewsLatest NewsPoliticsSportsCrimeCinema

ಅಧಿಕಾರಿ ಆತ್ಮಹತ್ಯೆ ಪ್ರಕರಣ ಮುಚ್ಚಿ ಹಾಕಲು ಯತ್ನ: ನ್ಯಾಯಾಧೀಶರಿಂದ ತನಿಖೆ ನಡೆಯಲಿ- ಸಿ.ಟಿ ರವಿ ಆಗ್ರಹ.

01:52 PM May 30, 2024 IST | prashanth

ಬೆಂಗಳೂರು,ಮೇ,30,2024 (www.justkannada.in):  ಎಸ್.ಟಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣವನ್ನ ಮುಚ್ಚಿ ಹಾಕಲು ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಹೈಕೋರ್ಟ್ ಜಡ್ಜ್ ರಿಂದ ಪ್ರಕರಣ ಕುರಿತು ತನಿಖೆಯಾಗಲಿ ಎಂದು ಮಾಜಿ ಸಚಿವ ಸಿ.ಟಿ ರವಿ ಆಗ್ರಹಿಸಿದರು.

ಅಧಿಕಾರಿ ಚಂದ್ರಶೇಖರ್ ಬರೆದಿದ್ದ ಡೆತ್ ನೋಟ್ ನಲ್ಲಿರುವ  ನಾಗರಾಜ್ ಹೆಸರಿದೆ ಎನ್ನಲಾಗಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೊತೆ ನಾಗರಾಜ್ ಇರುವ ಫೋಟೊವನ್ನ ಮಾಜಿ ಶಾಸಕ ಸಿಟಿ ರವಿ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಸಿ.ಟಿ ರವಿ, ನಾಗರಾಜ್ ಡಿಸಿಎಂ ಡಿಕೆ ಶಿವಕುಮಾರ್  ಜತೆ ವಿಮಾನದಲ್ಲಿ ಹೋಗಿದ್ದಾನೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜೊತೆಗಿರುವಷ್ಟು  ನಾಗರಾಜ್ ಪ್ರಭಾವಿನಾ..?  ಅಕ್ರಮದಲ್ಲಿ ಶಾಮೀಲಾದ  ಅಧಿಕಾರಿಗಳ ಹೆಸರು ಡೆತ್ ನೋಟ್ ನಲ್ಲಿದೆ. ಪ್ರಕರಣ ಕುರಿತು ಹೈಕೋರ್ಟ್ ಜಡ್ಜ್ ರಿಂದ ತನಿಖೆಯಾಗಲಿ. ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಪ್ರಕರಣ ಮುಚ್ಚು ಹಾಕಿದ್ರೆ ಸರ್ಕಾರವೇ ಆಹುತಿಯಾಗಲಿದೆ ಎಂದು ಹೇಳಿದರು.

Key words: officer, suicide, case, investigation, CT Ravi

Tags :
ct raviinvestigationjudgeofficer- suicide- case
Next Article