For the best experience, open
https://m.justkannada.in
on your mobile browser.

ಭ್ರಷ್ಟಾಚಾರ ಎತ್ತಿಹಿಡಿಯಲು ಅಧಿಕಾರಿ ಆತ್ಮಹತ್ಯೆ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ-ಅಶ್ವಥ್ ನಾರಾಯಣ್ ಆಗ್ರಹ.

04:37 PM May 28, 2024 IST | prashanth
ಭ್ರಷ್ಟಾಚಾರ ಎತ್ತಿಹಿಡಿಯಲು ಅಧಿಕಾರಿ ಆತ್ಮಹತ್ಯೆ  ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಅಶ್ವಥ್ ನಾರಾಯಣ್ ಆಗ್ರಹ

ಬೆಂಗಳೂರು,ಮೇ,28,2024 (www.justkannada.in):  ST ನಿಗಮದ ಅಧಿಕಾರಿ ಚಂದ್ರ ಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಅಶ್ವಥ್ ನಾರಾಯಣ್, ಭ್ರಷ್ಟಾಚಾರ ಎತ್ತಿ ಹಿಡಿಯಲು ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಹಣಕಾಸು ಖಾತೆ ಯಾರ ಕೈಯಲ್ಲಿ ಇದೆ.  ನಮ್ಮ ಸರ್ಕಾರದ ಅವಧಿಯಲ್ಲಿ ಪೇ ಸಿಎಂ ಅಂತಾ ಕರೆದ್ರಲ್ವಾ  ಈಗ ರಾಜೀನಾಮೆ ಕೊಡಿ ಎಂದು ಒತ್ತಾಯಿಸಿದರು.

ಸರ್ಕಾರದ ಭ್ರಷ್ಟಾಚಾರಕ್ಕೆ ಅಧಿಕಾರಿ ಆತ್ಮಹತ್ಯೆಯೇ ಸಾಕ್ಷಿ- ಡಿ.ವಿ ಸದಾನಂದಗೌಡ.

ಈ ಕುರಿತು ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಮಾತನಾಡಿ, ನಿನ್ನೆ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಂತಿದೆ. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಸಚಿವರಿಂದ ರಾಜ್ಯದ ಎಲ್ಲ ಅಧಿಕಾರಿಗಳು ಒತ್ತಡಕ್ಕೆ ಒಳಗಾಗಿರುವುದು ಗೊತ್ತಿದೆ. ಅಧಿಕಾರಿಗಳಿಂದ ಚೆಕ್ ಗೆ ಸಹಿ ಹಾಕಿಸಿದ್ದಾರೆ. ಸಚಿವ ಸಂಪುಟವೇ ಒತ್ತಡ ಹಾಕಿ ಸಹಿ ಹಾಕಿಸಿದ್ದಾರೆ.  ಸರ್ಕಾರದ ಭ್ರಷ್ಟಾಚಾರಕ್ಕೆ ಅಧಿಕಾರಿ ಆತ್ಮಹತ್ಯೆಯೇ ಸಾಕ್ಷಿ. ಯಾರು ಸಹ ಆತ್ಮಹತ್ಯೆ ಮಾಡಿಕೊಳ್ಳಬಾರದು.ಅಧಿಕಾರಿಗಳ ಪರವಾಗಿ ಬಿಜೆಪಿ ಇದೆ. ಯಾರೂ ಆತ್ಮಹತ್ಯೆ ಮಾಡಿಕೊಳ್ಳದಿರಿ ಎಂದು ಮನವಿ ಮಾಡಿದರು.

Key words: Officer, suicide, corruption, Ashwath Narayan

Tags :

.