HomeBreaking NewsLatest NewsPoliticsSportsCrimeCinema

ಗ್ಯಾರಂಟಿ ಯೋಜನೆ ಸರಿದೂಗಿಸಲು ತೈಲಬೆಲೆ ಹೆಚ್ಚಳ- ಸಂಸದ ಜಗದೀಶ್ ಶೆಟ್ಟರ್ ಕಿಡಿ.

12:10 PM Jun 20, 2024 IST | prashanth

ಬೆಳಗಾವಿ,ಜೂನ್,20,2024 (www.justkannada.in):  ಗ್ಯಾರಂಟಿ ಯೋಜನೆ ಸರಿದೂಗಿಸಲು ರಾಜ್ಯದಲ್ಲಿ ತೈಲಬೆಲೆ ಹೆಚ್ಚಳ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ದ ಸಂಸದ ಜಗದೀಶ್ ಶೆಟ್ಟರ್ ಕಿಡಿ ಕಾರಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಜಗದೀಶ್ ಶೆಟ್ಟರ್,  ಗ್ಯಾರಂಟಿ ಯೋಜನೆ ಸರಿದೂಗಿಸಲು ತೈಲಬೆಲೆ ಹೆಚ್ಚಳ ಮಾಡಲಾಗಿದೆ ಇದು ಸರಿಯಾದ ಕ್ರಮವಲ್ಲ . ತೈಲಬೆಲೆ ಏರಿಕೆ ಎಲ್ಲದರ ಮೇಲೂ ಪರಿಣಾಮ ಬೀರುತ್ತೆ. ಪಕ್ಕದ ರಾಜ್ಯದ ಗೋವಾದಲ್ಲಿ ಬಿಜೆಪಿಯೇ ಆಧಿಕಾರದಲ್ಲಿದೆ. ಅಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಇಲ್ಲಿಗಿಂತ 9 ರೂ.  ಇದಕ್ಕೆ ಸಿದ್ದರಾಮಯ್ಯ ಬಳಿ ಉತ್ತರವಿದೆಯಾ.  ಇದೆ ರೀತಿ ಮಾಡಿದ್ರೆ ಜನ ದಂಗೆ ಏಳುವ ಸ್ಥಿತಿ ಉಂಟಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಿನ್ನು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯನ್ನ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದೆ.

Key words: Oil price, hike, guarantee, MP, Jagadish Shettar

Tags :
Oil price -hike –guarantee-scheme- MP- Jagadish Shettar
Next Article