HomeBreaking NewsLatest NewsPoliticsSportsCrimeCinema

ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲೂ ಆಪರೇಷನ್..? ಸುಳಿವು ನೀಡಿದ ಏಕನಾಥ್ ಸಿಂಧೆ.

01:14 PM May 13, 2024 IST | prashanth

ಮುಂಬೈ, ಮೇ 13,2024 (www.justkannada.in): ಮಹಾರಾಷ್ಟ್ರದಲ್ಲಿ ಮಹಾಘಟಬಂಧನ ಸರ್ಕಾರ ಉರುಳಿಸಿದ ರೀತಿಯಲ್ಲೇ ಕರ್ನಾಟಕದಲ್ಲೂ ಅದೇ ಮಾದರಿಯಲ್ಲಿ ಅಪರೇಷನ್  ನಡೆಯಲಿದೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ ಸಿಂಧೆ ಸುಳಿವು ನೀಡಿದ್ದಾರೆ.

ತೆರೆಯ ಮರೆಯಲ್ಲಿ ಕರ್ನಾಟಕದ ಬಿಜೆಪಿ ನಾಯಕರಿಂದಲೇ ತಮಗೆ ಆಪರೇಷನ್​​ ಮಾಡಲು  ಆಹ್ವಾನವಿದೆ ಎಂದು ಹೇಳಿರುವ ಏಕನಾಥ ಸಿಂಧೆ, ‘ನಾಥ್’ ಮಾದರಿ ಆಪರೇಷನ್ ಮಹಾರಾಷ್ಟ್ರದಲ್ಲಿ ಖ್ಯಾತಿ ಗಳಿಸಿದೆ. ಅದೇ ಮಾದರಿಯ ಆಪರೇಷನ್​​ಗೆ ಕರ್ನಾಟಕದಿಂದಲೂ ಆಹ್ವಾನವಿದೆ ಎಂದು ಮಹಾ ಸಿಎಂ ಏಕನಾಥ ಸಿಂಧೆ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ನಾಸಿಕ್ ಲೋಕಸಭಾ ಕ್ಷೇತ್ರದಲ್ಲಿ ಶಿಂಧೆ ಸಮ್ಮುಖದಲ್ಲಿ ಶಿವಸೇನಾ ಇತ್ತೀಚಗೆ ಶಿಂಧೆ ಬಣದ ಪದಾಧಿಕಾರಿಗಳ ಸಭೆಯನ್ನು ಆಯೋಜಿಸಿತ್ತು. ಈ ವೇಳೆ ಮಾತನಾಡಿದ್ದ ಶಿಂಧೆ, ಲೋಕಸಭೆಯ ನಂತರ ಕರ್ನಾಟಕದಲ್ಲಿ ಬದಲಾವಣೆಯಾಗಲಿದೆ. ನಾನು ಇತ್ತಿಚೇಗೆ ಕರ್ನಾಟಕದ ಒಂದು ಸಭೆಗೆ ತೆರಳಿದ್ದೆ. ಕರ್ನಾಟಕದಲ್ಲಿಯೂ ‘ನಾಥ’ ಆಪರೇಷನ್ ಮಾಡೋದಿದೆ’ ಅಂದಿದ್ದಾರೆ. ‘ನಾಥ ಆಪರೇಷನ್’ ಅಂದ್ರೆ ಏನು..? ಅಂತ ಕೇಳಿದೆ. ಆಗ ಅವರು, ನೀವು ಮಹಾರಾಷ್ಟ್ರದ ಮಹಾಘಟಬಂಧನ ಸರ್ಕಾರ ಪತನ ಮಾಡಿದ್ರಿ. ಹೀಗಾಗಿ ನಿಮ್ಮ ಅನುಭವ ನಮಗೆ ಬಹಳ ಅವಶ್ಯಕವಿದೆ ಎಂದರು. ಖಂಡಿತವಾಗಿಯೂ ನಾನು ಬರುತ್ತೇನೆ ಎಂದು ಹೇಳಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.

Key words: Operation, Karnataka, Maharashtra, CM

Tags :
Operation - Karnataka – Maharashtra-CM-Eknath Sinde
Next Article