HomeBreaking NewsLatest NewsPoliticsSportsCrimeCinema

ವಿರೋಧ ಪಕ್ಷಗಳ ಅಹೋರಾತ್ರಿ ಧರಣಿ ರಾಜಕೀಯ ನಾಟಕವಷ್ಟೆ- ಸಚಿವ ಹೆಚ್.ಕೆ ಪಾಟೀಲ್

10:59 AM Jul 25, 2024 IST | prashanth

ಬೆಂಗಳೂರು,ಜುಲೈ,25,2024 (www.justkannada.in): ಮುಡಾ ಹಗರಣಗಳ ಚರ್ಚೆಗೆ ಆಗ್ರಹಿಸಿ ವಿಪಕ್ಷಗಳ  ಅಹೋರಾತ್ರಿ ಧರಣಿ  ನಡೆಸುತ್ತಿರುವ ಕುರಿತು ಕಾನೂನು, ಸಂಸದೀಯ ಮತ್ತು ಪ್ರವಾಸೋದ್ಯಮ ಸಚಿವರಾದ ಹೆಚ್ ಕೆ ಪಾಟೀಲ್, ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿದ ಅವರು, ನಿನ್ನೆ ಪ್ರತಿಪಕ್ಷದವರು ಅಹೋರಾತ್ರಿ ಧರಣಿ ಮಾಡಿದ್ದಾರೆ. ನಿಲುವಳಿ ಪ್ರಸ್ತಾಪ ಯಾಕೆ ಮಾಡಬಾರದು ಎನ್ನೊದನ್ನ ವಿವರಿಸಿದ್ದಾರೆ. ಇಷ್ಟೆಲ್ಲ ಇದ್ದರೂ ಅವರು ಧರಣಿ ಮಾಡಿದ್ದಾರೆ. ರಾಜಕೀಯ ತಂತ್ರಕ್ಕೆ ಅವರು ವಿಧಾನಸಭಾ ಅಧಿವೇಶನ ಉಪಯೋಗ ಮಾಡಿಕೊಂಡಿದ್ದಾರೆ. ಈಗಾಗಲೇ ಈ ತನಿಖೆಯನ್ನ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರ ಮೂಲಕ ಮಾಡಲಾಗುತ್ತಿದೆ. ಆಪಾದನೆ ಅವರ ಮೇಲಿದ್ರೂ ಸಿಎಂ ತನಿಖೆಗೆ ಆಯೋಗ ರಚಿಸಿದ್ದಾರೆ. ತನ್ನ ಮೇಲೆ ಆಪಾದನೆ ಇದ್ದಾಗ ಯಾರಾದರೂ ಒಬ್ಬ ಮುಖ್ಯಮಂತ್ರಿ ತನಿಖಾ‌ ಆಯೋಗ ರಚಿಸಿರೋ‌ ಉದಾಹಣೆ ಇದೆಯಾ.. ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೋಮ್ಮಾಯಿ ಆಯೋಗ ರಚನೆ ಮಾಡಿದ್ರಾ..? ವಿರೋಧ ಪಕ್ಷ ಸಿಎಂ ನಿಲುವನ್ನ ಪ್ರಶಂಸೆ ಮಾಡಬೇಕಿತ್ತು. ಇದು ಕೇವಲ ರಾಜಕೀಯ ನಾಟಕ ಅಷ್ಟೆ ಎಂದು ಟೀಕಿಸಿದರು.

ಉತ್ತರ ಕನ್ನಡದಲ್ಲಿ ಮಲೆನಾಡಲ್ಲಿ ಸಾಕಷ್ಟು ಅನಾಹುತ ಆಗಿದೆ. ಆದರೆ ಇದರ ಬಗ್ಗೆ ಚರ್ಚೆ ಮಾಡಿಲ್ಲ. ಒನ್ ನೇಷನ್ ಒನ್ ಎಲೆಕ್ಷನ್ ವಿಚಾರದ ಬಿಲ್ ಇದೆ. ನೀಟ್ ವಿರೋಧಿಸಿ ಸಿಇಟಿ ಮರು ಸ್ಥಾಪಿಸುವ ಬಿಲ್ ಇದೆ. ಹತ್ತಾರು ಜನರ ಪರವಾದ ಬಿಲ್ ಬಗ್ಗೆ ಮಾತನಾಡ್ತಿಲ್ಲ. ವಿಪಕ್ಷಗಳ ಧರಣಿ ಕೇವಲ ರಾಜಕೀಯ ಡ್ರಾಮ ಅಷ್ಟೇ ಎಂದರು.

Key words: opposition parties, protest, political drama, Minister, H. K Patil

Tags :
H.K. Patilministeropposition partiespolitical dramaprotest
Next Article