HomeBreaking NewsLatest NewsPoliticsSportsCrimeCinema

ಸದನದಲ್ಲಿ ಮುಂದುವರೆದ ವಿಪಕ್ಷಗಳ ಧರಣಿ: ಸರ್ಕಾರದ ವಿರುದ್ದ ಆರ್.ಅಶೋಕ್ ಕಿಡಿ

11:36 AM Jul 22, 2024 IST | prashanth

ಬೆಂಗಳೂರು,ಜುಲೈ,22,2024 (www.justkannada.in): ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ವಿಪಕ್ಷಗಳ ಧರಣಿ ಮುಂದುವರೆದಿದೆ.

ಇಂದು ಸಹ ಸದನ ಆರಂಭವಾಗುತ್ತಿದ್ದಂತೆ ಬಿಜೆಪಿ, ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸ್ಪೀಕರ್ ಯುಟಿ ಖಾದರ್ ಪ್ರತಿಭಟನೆ ಮಾಡದಂತೆ ಮನವಿ ಮಾಡಿದ್ದಾರೆ.

ಸದನದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್,  ವಾಲ್ಮೀಕಿ ಅಭಿವೃದ್ದಿ ನಿಗಮ ವಿಚಾರವಾಗಿ ಹೋರಾಟ ಮಾಡಿದ್ದವು.   ಆದರೆ ವಾಲ್ಮೀಕಿ ಹಗರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಉತ್ತರಿಸಲಿಲ್ಲ. ನಮ್ಮ ಕಾಲದಲ್ಲಿ ಹಗರಣ ಆಗಿದೆ ಎಂದು  ಸಿಎಂ  ಸಿದ್ದರಾಮಯ್ಯ ಹೇಳಿದ್ದಾರೆ.  ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ನಾವು ಪಟ್ಟು ಹಿಡಿದಿದ್ದವು.  ಸದನದಲ್ಲಿ ಮಾತನಾಡಿದ್ದು ಪತ್ರಿಕೆಯಲ್ಲಿ ಜಾಹೀರಾತು. ಇದು ಸರಿಯಾದ ಕ್ರಮ ಅಲ್ಲ ಎಂದರು.

Key words: Opposition party, continues,protest session, R. Ashok

Tags :
continuesopposition partyprotest sessionR.ashok
Next Article