For the best experience, open
https://m.justkannada.in
on your mobile browser.

ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ ಎಂಬರ್ಥದ ಆದೇಶ: ಸ್ಪಷ್ಟನೆ ನೀಡಿದ ಸಚಿವ ಶಿವರಾಜ್ ತಂಗಡಗಿ.

11:50 AM Feb 21, 2024 IST | prashanth
ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ ಎಂಬರ್ಥದ ಆದೇಶ  ಸ್ಪಷ್ಟನೆ ನೀಡಿದ ಸಚಿವ ಶಿವರಾಜ್ ತಂಗಡಗಿ

ಬೆಂಗಳೂರು, ಫೆಬ್ರವರಿ 21,2024(www.justkannada.in):  ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ  ಆದೇಶ  ಹೊರಡಿಸಿತ್ತು.ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ ಎಂಬರ್ಥದ ಆದೇಶ ಇದಾಗಿದ್ದು ವಿವಾದ ಸೃಷ್ಠಿಸಿದೆ. ಈ ಕುರಿತು ವರದಿಯಾದ ಬೆನ್ನಲ್ಲೆ ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್​ ತಂಗಡಗಿ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಒಂದು ಸಣ್ಣ ಪ್ರಿಂಟ್ ಸಮಸ್ಯೆ ಆಗಿದೆ. ನಮ್ಮಗೆ ಎಲ್ಲಾ ಶಾಲೆಗಳು ಒಂದೆ. ಆದೇಶ ಮಾಡಬೇಕಾದರೆ ಸರ್ಕಾರಿ ಶಾಲೆ ಅನುದಾನಿತ‌ ಶಾಲೆ ಅಂತ ಪ್ರಿಂಟ್​​ ಮಿಸ್ಟೇಕ್​ ಆಗಿದೆ. ಅದು ಎಲ್ಲ ಶಾಲೆಗಳು ಅಂತ ತಿದ್ದುಪಡಿ ಮಾಡಿಸುತ್ತೇವೆ. ನಮ್ಮ ಸರ್ಕಾರಕ್ಕೆ ಕನ್ನಡ ಬಗ್ಗೆ ಕಾಳಜಿ ಇದೆ. ನಾವು ಬಹಳ ಸ್ಪಷ್ಟವಾಗಿ ಇದ್ದೇವೆ. ಆದೇಶ ಪ್ರತಿಯ ಸಾಧಕ-ಭಾದಕ ಹೇಳಬೇಕು. ಸಹಜವಾಗಿ ನೋಟ್ ಶೀಟ್ ಒಳಗಡೆ ಸಣ್ಣಪುಟ್ಟ ಸಮಸ್ಯೆ ಆಗಿದೆ ಎಂದು ತಿಳಿಸಿದರು.

ಇನ್ನು ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಕಡ್ಡಾಯ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಿವರಾಜ್ ತಂಗಡಗಿ, ಈ ಬಗ್ಗೆ ಸದನದಲ್ಲಿ ಚರ್ಚೆ ಆಗಿದೆ. ಕೈಗಾರಿಗೆಗಳಿಗೂ ಹೆಸರು ಹಾಕುವ ಪದ್ದತಿ ಬರುತ್ತಿದೆ ಎಂದರು.

Key words: order -NaadaGeethe - not -compulsory - private schools: Minister -Shivraj Thangadagi -clarified.

Tags :

.