HomeBreaking NewsLatest NewsPoliticsSportsCrimeCinema

ಜಾತಿಗಣತಿ ವರದಿ ವಿರೋಧಕ್ಕೆ ಆಕ್ರೋಶ: ಜನಾಭಿಪ್ರಾಯವೇ ಅಂತಿಮ ಎಂದ ಸಚಿವ ಕೆ.ಎನ್ ರಾಜಣ್ಣ.

11:25 AM Dec 18, 2023 IST | prashanth

ತುಮಕೂರು,ಡಿಸೆಂಬರ್,18,2023(www.justkannada.in):  ಜಾತಿಗಣತಿ ವರದಿ ಬಿಡುಗಡೆಗೂ ಮುನ್ನವೇ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆ ಸಹಕಾರ ಸಚಿವ ಕೆ.ಎನ್ ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಕೆ.ಎನ್ ರಾಜಣ್ಣ, ಕೆಲವರು ಕಾಂತರಾಜ ವರದಿ ವೈಜ್ಞಾನಿಕವಾಗಿ ಇಲ್ಲ ಅಂತಾರೆ. ಇದು ಒಂದು ದಿನಕ್ಕೆ ಒಂದು ತಿಂಗಳಿಗೆ ಮಾಡಿದ್ದಲ್ಲ. ಸರ್ವೇ ವರ್ಷಾನುಗಟ್ಟಲೆ ಆಗಿದೆ.  200 ಕೋಟಿ ರೂ. ಖರ್ಚಾಗಿದೆ. ಕಾಂತರಾಜು ವರದಿ ಜನಪರವಾಗಿದ್ದರೇ ಸರ್ಕಾರ ಒಪ್ಪಿಕೊಳ್ಳುತ್ತೆ. ಬೇಡ ಅಂತಾ ಜನರ  ಅಭಿಪ್ರಾಯ ಬಂದ್ರೆ ತಿರಸ್ಕಾರವಾಗುತ್ತದೆ ಎಂದರು.

ವರದಿ ನೋಡಿಲ್ಲ, ಓದಿಲ್ಲ ಬರುವ ಮುನ್ನ ಆಕ್ಷೇಪಣೆ ಸರಿಯಲ್ಲ. ಜನಾಭಿಪ್ರಾಯವೇ ಅಂತಿಮವಾಗುತ್ತದೆ ಎಂದು ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.

Key words: Outrage- over -opposition -caste census –report-Minister -KN Rajanna

Tags :
caste censusKN RajannaministerOutrage- over -oppositionReport
Next Article