For the best experience, open
https://m.justkannada.in
on your mobile browser.

ಪ್ಯಾರಾಲಿಂಪಿಕ್ಸ್‌:  ‘ಚಿನ್ನ’ ಗೆದ್ದ ಭಾರತದ ನಿತೇಶ್ ಕುಮಾರ್

06:32 PM Sep 02, 2024 IST | prashanth
ಪ್ಯಾರಾಲಿಂಪಿಕ್ಸ್‌   ‘ಚಿನ್ನ’ ಗೆದ್ದ ಭಾರತದ ನಿತೇಶ್ ಕುಮಾರ್

ಪ್ಯಾರಿಸ್,ಸೆಪ್ಟಂಬರ್,2,2024 (www.justkannada.in):  ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಬ್ಯಾಡ್ಮಿಂಟನ್ ಎಸ್‌ಎಲ್ 3 ವಿಭಾಗದಲ್ಲಿ ಭಾರತದ ನಿತೇಶ್ ಕುಮಾರ್ ಚಿನ್ನದ ಪದಕ ಗೆದ್ದಿದ್ದಾರೆ.

ಹರಿಯಾಣದ ಷಟ್ಲರ್ ನಿತೇಶ್ ಕುಮಾರ್, ಗ್ರೇಟ್‌ ಬ್ರಿಟನ್‌ನ ಡೇನಿಯಲ್ ಬೆಥೆಲ್ ವಿರುದ್ಧ ಮೂರು ಗೇಮ್‌ ಗಳ ಪಂದ್ಯದಲ್ಲಿ 2-1 (21-14, 18-21, 22-21) ಗೆಲುವು ಸಾಧಿಸಿದರು.

ಪ್ಯಾರಿಸ್ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ. ಅಗ್ರ ಶ್ರೇಯಾಂಕದ ನಿತೇಶ್ ಕುಮಾರ್ ಮೊದಲ ಗೇಮ್‌ ನಲ್ಲಿ 21-14 ರಲ್ಲಿ ಗೆಲುವು ಸಾಧಿಸಿದರು, ಎರಡನೇ ಗೇಮ್‌ನಲ್ಲಿ 18-21ರಲ್ಲಿ ಸೋಲನುಭವಿಸಿದರು. ಮೂರನೇ ನಿರ್ಣಾಯಕ ಗೇಮ್‌ನಲ್ಲಿ ನಿತೇಶ್ ಕುಮಾರ್ 23-21 ರಲ್ಲಿ ಗೆಲ್ಲುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

Key words: Paralympics,  India,  Nitesh Kumar, Gold Medal

Tags :

.