HomeBreaking NewsLatest NewsPoliticsSportsCrimeCinema

ನಾಳೆ 3ನೇ ಅವಧಿಯ ಮೊದಲ ಬಜೆಟ್: ಸುಗಮ ಕಲಾಪಕ್ಕೆ ಪ್ರಧಾನಿ ಮೋದಿ ಮನವಿ

11:03 AM Jul 22, 2024 IST | prashanth

ನವದೆಹಲಿ,22,2024 (www.justkannada.in):  ಸಂಸತ್ ನ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಲಿದ್ದು, ನಾಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.

ಇಂದು ಕಲಾಪ ಆರಂಭಕ್ಕೂ ಮುನ್ನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಮ್ಮ 3ನೇ ಅವಧಿಯ ಮೊದಲ ಬಜೆಟ್ ನಾಳೆ ಮಂಡನೆಯಾಗಲಿದೆ.  60 ವರ್ಷದ ಬಳಿಕ ಮೊದಲ ಬಾರಿಗೆ 3ನೇ ಬಾರಿಗೆ ಬಜೆಟ್  ಮಂಡನೆ ಮಾಡಲಾಗುತ್ತಿದೆ. ಜನರು ನೀಡಿದ ಅವಕಾಶ ಮತ್ತಷ್ಟು ಅಭಿವೃದ್ದಿಗೆ ಬಳಕೆ ಮಾಡುತ್ತೇವೆ.  ವಿಕಾಸ್ ಭಾರತದಡಿ ನಮ್ಮ ಸರ್ಕಾರ ಕೆಲಸ ಮಾಡಲಿದೆ ಎಂದರು.

ನಾವು ಕೊಟ್ಟ ಭರವಸೆಗಳನ್ನ ಈಡೇರಿಸಬೇಕಿದೆ. ಜನ ನಮ್ಮ ಮೇಲೆ ತುಂಬಾ ನಿರೀಕ್ಷೆ ಇಟ್ಟಿದ್ದಾರೆ ಹಳೆಯ ಕಹಿ ನೆನಪುಗಳನ್ನ ಮರೆಯೋಣ. ಚುನಾವಣೆಯಗಳಲ್ಲಿ ರಾಜಕೀಯ ವೈರತ್ವ ಇರಲಿ. ಈಗ ವಿಕಸಿತ ಭಾರತದ್ದತ್ತ  ಗಮನ ಹರಿಸೋಣ  ಕೆಲವು ಪಕ್ಷಗಳು ಸದನದ ಸಮಯ ಹಾಳು ಮಾಡುತ್ತಿವೆ .  ಸಮಯ ಹಾಳು ಮಾಡದೇ ಎಲ್ಲಾ ವಿಷಯ ಚರ್ಚೆ ಮಾಡೋಣ  ಎಂದು ಸುಗಮ ಕಲಾಪಕ್ಕೆ ಅವಕಾಶ ನೀಡುವಂತೆ ಪ್ರಧಾನಿ ಮೋದಿ ಮನವಿ ಮಾಡಿದರು.

Key words: Parliament session, budget, 3rd term, PM Modi

Tags :
3rd termbudgetParliament sessionPM Modi
Next Article