HomeBreaking NewsLatest NewsPoliticsSportsCrimeCinema

ಸಂಸತ್ ಅಧಿವೇಶನ:  30ಕ್ಕೂ ಹೆಚ್ಚು ಸಂಸದರು ಅಮಾನತು.

05:03 PM Dec 18, 2023 IST | prashanth

ನವದೆಹಲಿ,ಡಿಸೆಂಬರ್ 18,2023(www.justkannada.in):  ಸಂಸತ್ ಅಧಿವೇಶನ ನಡೆಯುತ್ತಿದ್ದು ಲೋಕಸಭೆಯಲ್ಲಿ ಭದ್ರತಾ ವೈಪಲ್ಯ ಪ್ರಕರಣ ಸಂಬಂಧ ಪ್ರತಿಭಟನೆ ನಡೆಸಿದ 30ಕ್ಕೂ ಹೆಚ್ಚು ಸಂಸದರನ್ನ ಕಲಾಪದಿಂದ ಸ್ಪೀಕರ್ ಓಂ ಬಿರ್ಲಾ ಅಮಾನತು ಮಾಡಿದ್ದಾರೆ.

ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸೇರಿದಂತೆ 30ಕ್ಕೂ ಹೆಚ್ಚು ಸದಸ್ಯರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಸದನದಿಂದ ಅಮಾನತುಗೊಳಿಸಲಾಗಿದೆ.

ಲೋಕಸಭೆ ಭದ್ರತಾ ಲೋಪದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಒತ್ತಾಯಿಸಿ ಸಂಸದರು ಸದನದೊಳಗೆ ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ 30ಕ್ಕೂ ಹೆಚ್ಚು ಸಂಸದರನ್ನ ಅಮಾತು ಮಾಡಲಾಗಿದೆ. ಇದುವರೆಗೆ 47 ವಿರೋಧ ಪಕ್ಷದ ಸಂಸದರನ್ನು ಸಂಸತ್ತಿನ ಉಭಯ ಸದನಗಳಿಂದ ಅಮಾನತುಗೊಳಿಸಲಾಗಿದೆ.

ಡಿಸೆಂಬರ್ 13 ರಂದು ನಡೆದ ಸಂಸತ್ತಿನ ಭದ್ರತಾ ಉಲ್ಲಂಘನೆಯ ಘಟನೆಯ ಬಗ್ಗೆ ವಿರೋಧ ಪಕ್ಷದ ಸಂಸದರು ಗದ್ದಲವನ್ನು ಸೃಷ್ಟಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಗೌರವ್ ಗೊಗೊಯ್, ಎ ರಾಜಾ, ಕಲ್ಯಾಣ್ ಬ್ಯಾನರ್ಜಿ, ದಯಾನಿಧಿ ಮುರಸೋಲಿ ಮಾರನ್, ಕೆ ಜಯಕುಮಾರ್, ವಿಜಯ್ ವಸಂತ್, ಪ್ರತಿಮಾ ಮೊಂಡಲ್, ಸೌಗತ ರಾಯ್ ಮತ್ತು ಸತಾಬ್ದಿ ರಾಯ್ ಸೇರಿದಂತೆ ಇತರ  ನಾಯಕರು ಅಮಾನತುಗೊಂಡಿದ್ದಾರೆ.

Key words: Parliament- session- More than -30 MPs- suspended.

Tags :
Parliament- session- More than -30 MPs- suspended.
Next Article