ಸಂಸತ್ ಹೊಗೆ ಬಾಂಬ್ ಸ್ಪೋಟ ಕೇಸ್: ಡಿ.ಮನೋರಂಜನ್ ಕೃತ್ಯದ ರೂವಾರಿ ಎಂದು ಚಾರ್ಜ್ ಶೀಟ್ ಸಲ್ಲಿಕೆ
ಮೈಸೂರು, ಸೆಪ್ಟಂಬರ್, 9,2024 (www.justkannada.in): ದೇಶಾದ್ಯಂತ ತಲ್ಲಣ ಸೃಷ್ಠಿಸಿದ್ದ ಸಂಸತ್ ನಲ್ಲಿ ಸ್ಮೋಕ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ದ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು ಮೈಸೂರಿನ ಡಿ.ಮನೋರಂಜನ್ ಕೃತ್ಯದ ರೂವಾರಿ ಎಂದು ಉಲ್ಲೇಖಿಸಲಾಗಿದೆ.
ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದ್ದು, ಡಿ.ಮನೋರಂಜನ್ ಕೃತ್ಯದ ರುವಾರಿ, ಸಂಚುಕೋರ ಎಂದು ಅಂತಿಮ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಡಿಸೆಂಬರ್ 13, 2023 ರಂದು ದೆಹಲಿಯ ಸಂಸತ್ ನಲ್ಲಿ ಹೊಗೆ ಬಾಂಬ್ ಸ್ಫೋಟ ನಡೆಸಲಾಗಿತ್ತು. ಸಂಸತ್ ನಲ್ಲಿ ಸ್ಮೋಕ್ ಕ್ಯಾನ್ ಹಾರಿಸಿ ಆರೋಪಿಗಳು ದಾಂಧಲೆ ಎಬ್ಬಿಸಿದ್ದರು. ಈ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ತರಲು ಹುನ್ನಾರ ನಡೆಸಿದ್ದರು. ಅಲ್ಪ ಸಮಯದಲ್ಲೇ ಜಾಗತಿಕ ಖ್ಯಾತಿ ಗಳಿಸುವ ಪ್ರಯತ್ನ ಮಾಡಿದ್ದರು.
ಲಲಿತ್ ಝಾ, ಅಮೋದ್ ಶಿಂಧೆ, ಮಹೇಶ್ ಕುಮಾವತ್, ಸಾಗರ್ ಶರ್ಮಾ, ನೀಲಂ ಆರೋಪಿಗಳಾಗಿದ್ದು, ಮೈಸೂರಿನ ಮನೋರಂಜನ್ ಮನೆಯಲ್ಲಿ ಮೊದಲಸಭೆ ನಡೆಸಿದ್ದು, 2022ರಲ್ಲಿ ಗುರುಗ್ರಾಮದಲ್ಲಿ ಎರಡನೇ ಸಭೆ ನಡೆದಿತ್ತು. ದಿಲ್ಲಿಯ ಪಹಾಢ್ ಗಂಜ್ ನಲ್ಲಿ ಮೂರನೇ ಸಭೆ ನಡೆಸಿದ್ದ ಆರೋಪಿಗಳು ಸತತ ಎರಡು ವರ್ಷಗಳ ಕಾಲ ಪ್ರಯತ್ನಪಟ್ಟಿ ಸಂಸತ್ ನಲ್ಲಿ ಸ್ಮೋಕ್ ಬಾಂಬ್ ಸ್ಪೋಟಕ್ಕೆ ಯತ್ನಿಸಿದ್ದರು. ಹಿಂಸಾತ್ಮಕ ವಿಡಿಯೋಗಳ ಪ್ರದರ್ಶನ ಮೂಲಕ ಸಂಘಟನೆ ಹುಟ್ಟುಹಾಕುವ ಯತ್ನಕ್ಕೆ ಮುಂದಾಗಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ತಿಳಿಸಲಾಗಿದೆ.
Key words: Parliament, smoke bomb, blast, case, Charge sheet