For the best experience, open
https://m.justkannada.in
on your mobile browser.

ಗುತ್ತಿಗೆದಾರರ ಬಿಲ್ ಪಾಸ್ ಮಾಡಲು ತೊಂದರೆ: ದೂರು ನೀಡಿದರೆ ತನಿಖೆ- ಸಿಎಂ ಸಿದ್ದರಾಮಯ್ಯ.

02:48 PM Feb 03, 2024 IST | prashanth
ಗುತ್ತಿಗೆದಾರರ ಬಿಲ್ ಪಾಸ್ ಮಾಡಲು ತೊಂದರೆ  ದೂರು ನೀಡಿದರೆ ತನಿಖೆ  ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಫೆಬ್ರವರಿ,3,2024(www.justkannada.in):  ನಗರೋತ್ಥಾನ ಯೋಜನೆಯಡಿ ಕಾಮಗಾರಿಯ ಬಿಲ್ ಪಾಸು ಮಾಡಲು ಅಧಿಕಾರಿಗಳು ಸತಾಯಿಸುತ್ತಿರುವ ಬಗ್ಗೆ ದೂರು ನೀಡಿದರೆ ತನಿಖೆ ಕೈಗೊಂಡು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ,  ನಗರೋತ್ಥಾನ ಯೋಜನೆಯಡಿ ಕಾಮಗಾರಿಯ ಬಿಲ್ ಪಾಸು ಮಾಡಲು ಅಧಿಕಾರಿಗಳು ಸತಾಯಿಸುತ್ತಿರುವ ಬಗ್ಗೆ10 ಜಿಲ್ಲೆಗಳ ಗುತ್ತಿಗೆದಾರರು ಆರೋಪಿಸಿರುವ ಬಗ್ಗೆ ಅವರು ಮೇಲಿನಂತೆ ಪ್ರತಿಕ್ರಿಯೆ ನೀಡಿದರು.

ಎಲ್ಲರ ಅಭಿಪ್ರಾಯ ಪಡೆದು ಅಭ್ಯರ್ಥಿಗಳ ಪಟ್ಟಿ  ಅಂತಿಮಗೊಳಿಸಲಾಗುವುದು ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಆದಷ್ಟು ಶೀಘ್ರದಲ್ಲಿಯೇ ಸಿದ್ಧವಾಗಲಿದೆ ಎಂದರು. ಸಮೀಕ್ಷೆ ನಡೆಯುತ್ತಿದೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮಗನಿಗೆ ಟಿಕೆಟ್ ಕೊಡಿವ ಬಗ್ಗೆ ಪ್ರತಿಕ್ರಿಯೆ ನೀಡಿ,  ಅವರು ಕೂಡ ಒಬ್ಬ ಟಿಕೆಟ್  ಆಕಾಂಕ್ಷಿಯಾಗಿ ಕೇಳುತ್ತಾರೆ. ಕಾಂಗ್ರೆಸ್ ನಲ್ಲಿ ಟಿಕೆಟ್ ಕೇಳುವವರೇ ಸಂಖ್ಯೆ ಜಾಸ್ತಿಯಿರುತ್ತದೆ. ಸ್ಥಳೀಯ ನಾಯಕರು, ಬ್ಲಾಕ್ ಸಮಿತಿ ಅಧ್ಯಕ್ಷ ರು, ಶಾಸಕರು, ಸಂಸದರ ಅಭಿಪ್ರಾಯ ಪಡೆದು ಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಎಂದರು.

ಬಾಗೂರು ಚನ್ನಕೇಶವ ದೇವಸ್ಥಾನದೊಳಗೆ  ಈಶ್ವರಾನಂದ ಸ್ವಾಮೀಜಿ ಅವರನ್ನು ಬಿಟ್ಟಿಲ್ಲ ಎಂಬ ವಿಷಯಕ್ಕೆ ಪ್ರತಿಕ್ರಿಯೆ ನೀಡಿ ಗೊತ್ತಿಲ್ಲದ ವಿಚಾರದ ಬಗ್ಗೆ ಹೇಗೆ ಪ್ರತಿಕ್ರಿಯೆ ನೀಡುವುದು ಎಂದರು.

ಅಡ್ವಾಣಿಯವರಿಗೆ ಭಾರತ ರತ್ನ ದೊರೆತಿರುವ ಬಗ್ಗೆ ಮಾತನಾಡಿ ಕೊಡಲಿ,  ಬೇಡ ಎಂದು ನಾವು ಹೇಳಿಲ್ಲ. ನಾನು ತುಮಕೂರು ಸಿದ್ಧಗಂಗಸ್ವಾಮಿಗಳಿಗೆ ಕೊಡಬೇಕು ಎಂದು ತಿಳಿಸಿ ಪತ್ರ ಬರೆದಿದ್ದೆ ಎಂದರು.

Key words: passing - contractor's –bill-complaints - investigation - CM Siddaramaiah

Tags :

.