IPL ಇತಿಹಾಸದಲ್ಲೇ ಅತಿಹೆಚ್ಚು ಮೊತ್ತಕ್ಕೆ ಸೇಲ್ ಆದ ಪ್ಯಾಟ್ ಕಮಿನ್ಸ್: ಈವರೆಗೆ ಖರೀದಿಯಾದ ಆಟಗಾರರ ಪಟ್ಟಿ ಹೀಗಿದೆ..
ದುಬೈ,ಡಿಸೆಂಬರ್,19,2023(www.justkannada.in): ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆಟಗಾರರ ಹರಾಜು ಪ್ರಕ್ರಿಯೆ ದುಬೈನಲ್ಲಿ ಇಂದು ನಡೆಯುತ್ತಿದ್ದು ಐಪಿಎಲ್ ಇತಿಹಾಸದಲ್ಲೇ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅತಿ ಹೆಚ್ಚು ಮೊತ್ತಕ್ಕೆ ಖರೀದಿಯಾಗಿದ್ದಾರೆ.
2 ಕೋಟಿ ಮೂಲಬೆಲೆಯ ಆಸ್ಟ್ರೇಲಿಯಾ ಸ್ಟಾರ್ ಆಟಗಾರ ಪ್ಯಾಟ್ ಕಮಿನ್ಸ್ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ಪೈಪೋಟಿ ನಡೆಸಿದವು. ಪ್ಯಾಟ್ ಅಂತಿಮವಾಗಿ ಬರೋಬ್ಬರಿ 20.50 ಕೋಟಿಗೆ ಸನ್ ರೈಸರ್ಸ್ ಹೈದರಾಬಾದ್ ಪಾಲಾದರು.
ಆಸ್ಟ್ರೇಲಿಯಾದ ವಿಶ್ವಕಪ್ ವಿಜೇತ ನಾಯಕ ಪ್ಯಾಟ್ ಕಮಿನ್ಸ್ ಅವರನ್ನ ಸನ್ರೈಸರ್ಸ್ ಹೈದರಾಬಾದ್ 20.50 ಕೋಟಿ ರೂ.ಗೆ ಖರೀದಿಸಿದೆ.
ಇನ್ನು ಈ ಬಾರಿಯ ವಿಶ್ವಕಪ್ ನಲ್ಲಿ ಮಿಂಚಿದ್ದ ನ್ಯೂಜಿಲೆಂಡ್ ತಂಡದ ಯುವ ಆಲ್ ರೌಂಡರ್ ರಚಿನ್ ರವೀಂದ್ರ ಕೇವಲ 1 ಕೋಟಿ 80 ಲಕ್ಷ ರೂ. ಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಾರಾಟವಾಗಿದ್ದಾರೆ.
ಟೀಮ್ ಇಂಡಿಯಾ ಆಲ್ರೌಂಡರ್ ಶಾರ್ದೂಲ್ ಥಾಕೂರ್ (2 ಕೋಟಿ ಮೂಲಬೆಲೆ) ಖರೀದಿಗೆ ಸಿಎಸ್ ಕೆ ಮತ್ತು ಹೈದರಾಬಾದ್ ನಡುವೆ ಪೈಪೋಟಿ ಏರ್ಪಟಿತು. ಇವರು 4 ಕೋಟಿಗೆ ಚೆನ್ನೈ ಪಾಲಾಗಿದ್ದಾರೆ.
ದ. ಆಫ್ರಿಕಾದ ಜೆರಾಲ್ಡ್ ಕೋಟ್ಝಿ (2 ಕೋಟಿ ಮೂಲಬೆಲೆ) ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಂದೆಬಂತು. ಇವರು 5 ಕೋಟಿಗೆ ಮುಂಬೈ ಪಾಲಾಗಿದ್ದಾರೆ.
ಆರ್ಸಿಬಿ ಮಾಜಿ ಆಟಗಾರ ಹರ್ಷಲ್ ಪಟೇಲ್ ಖರೀದಿಗೆ ಗುಜರಾತ್, ಲಕ್ನೋ ಮತ್ತು ಪಂಜಾಬ್ ಮುಂದೆ ಬಂತು. ಕಠಿಣ ಪೈಪೋಟಿಯ ನಡುವೆ ಇವರು ಅಂತಿಮವಾಗಿ ಬರೋಬ್ಬರಿ 11.75 ಕೋಟಿಗೆ ಪಂಜಾಬ್ ಪಾಲಾಗಿದ್ದಾರೆ.
1 ಕೋಟಿ ಮೂಲಬೆಲೆಯೊಂದಿಗೆ ಕಾಣಿಸಿಕೊಂಡ ನ್ಯೂಝಿಲೆಂಡ್ ಆಲ್ರೌಂಡರ್ ಡೇರಿಲ್ ಮಿಚೆಲ್ ಖರೀದಿಗೆ ಡೆಲ್ಲಿ, ಚೆನ್ನೈ ಮತ್ತು ಪಂಜಾಬ್ ನಡುವೆ ಕಾಳಗ ನಡೆಯಿತು. ಕೊನೆಯಲ್ಲಿ ಇವರು 14 ಕೋಟಿಗೆ ಚೆನ್ನೈ ಪಾಲಾಗಿದ್ದಾರೆ.
Key words: Pat Cummins -sold – highest- amount – IPL- history