ಮಾಧ್ಯಮದವರನ್ನ ಹೊರಗಿಟ್ಟು ಶಾಂತಿ ಸಭೆ: ಸರ್ಕಾರದ ವಿರುದ್ದ ಸಿಟಿ ರವಿ ಆಕ್ರೋಶ
ಚಿಕ್ಕಮಗಳೂರು,ಸೆಪ್ಟಂಬರ್,14,2024 (www.justkannada.in) ನಾಗಮಂಗಲ ಗಲಭೆ ಕೇಸ್ ಹಿನ್ನೆಲೆಯಲ್ಲಿ ಇಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಶಾಂತಿ ಸಭೆ ನಡೆಸುತ್ತಿದ್ದು ಮಾಧ್ಯಮದವರನ್ನ ಶಾಂತಿ ಸಭೆಯಿಂದ ಹೊರಗಿಟ್ಟ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ದ ವಿಧಾನಪರಿಷತ್ ಸದಸ್ಯ ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಿ.ಟಿ ರವಿಮ ಲಾಡೆನ್ ಬಂದ್ರೆ ಹಮಾರ ಆದ್ಮಿ ಅಂತಾರೆ ಮುತಾಲಿಕ್ ಹೋದರೆ ಇವರಿಗೆ ಸಂಕಟವಾಗುತ್ತದೆ. ಆದರೆ ತಾಲಿಬಾನಿಗಳು ಹೋದರೆ ಸ್ವಾಗತಿಸುತ್ತಾರೆ. ಮಾಧ್ಯಮದವರನ್ನ ಹೊರಗಿಟ್ಟು ಶಾಂತಿ ಸಭೆ ಮಾಡುತ್ತಿದ್ದಾರೆ. ತಮ್ಮ ಹುಳುಕು ಮುಚ್ಚಿಕೊಳ್ಳಲು ಮಾಧ್ಯಮದವರನ್ನ ಹೊರಗಿಟ್ಟಿದ್ದಾರೆ ಎಂದು ಹರಿಹಾಯ್ದರು.
ಗಲಭೆ ಪ್ರಕರಣದಲ್ಲಿ ಗಣೇಶ ಕೂರಿಸಿದವರನ್ನೇ ಎ1 ಮಾಡಿರುವ ಹಿನ್ನೆಲೆ ಸರ್ಕಾರದ ವಿರುದ್ದ ಸಿ.ಟಿ ರವಿ ಕಿಡಿಕಾರಿದ್ದಾರೆ. ಈ ಕುರಿತು ಮಾತನಾಡಿರುವ ಎಂಎಲ್ ಸಿ ಸಿ.ಟಿ ರವಿ, ಮತಾಂಧರು ತಲ್ವಾರ್ ಝಳಪಿಸಿದ್ದಾರೆ ಮತಾಂಧರ ಮೇಲೆ ಕ್ರಮ ಕೈಗೊಳ್ಳದೇ ಗಣಪತಿ ಕೂರಿಸಿದವರನ್ನೇ ಎ1 ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು.
Key words: Peace, meeting, CT Ravi, against, Govt