HomeBreaking NewsLatest NewsPoliticsSportsCrimeCinema

ಪೆನ್ ಡ್ರೈವ್ ಪ್ರಕರಣ: ಎಸ್ ಐಟಿಗೆ ದೂರು ನೀಡಿದ ಜೆಡಿಎಸ್ ಶಾಸಕ.

01:38 PM May 13, 2024 IST | prashanth

ಬೆಂಗಳೂರು,ಮೇ,13,2024 (www.justkannada.in):  ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣ, ಪೆನ್ ಡ್ರೈವ್  ವಿಡಿಯೋ ಹರಿಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ನವೀನ್ ಗೌಡ ವಿರುದ್ಧ ಇದೀಗ ಅರಕಲಗೂಡು ಜೆಡಿಎಸ್ ಶಾಸಕ ಎ.ಮಂಜು ಎಸ್‌ ಐಟಿಗೆ ದೂರು ನೀಡಿದ್ದಾರೆ.

ಬೆಂಗಳೂರಿನ ಎಸ್‌ಐಟಿ ಕಚೇರಿಗೆ ಆಗಮಿಸಿ  ಶಾಸಕ ಎ.ಮಂಜು, ನವೀನ್ ಗೌಡ ವಿರುದ್ಧ ದೂರು ನೀಡಿದ್ದಾರೆ. ನವೀನ್ ಗೌಡ ಫೇಸ್ ಬುಕ್ ಖಾತೆಯಲ್ಲಿ ಅರಕಲಗೂಡು ಶಾಸಕ ಎ.ಮಂಜುಗೆ ಪೆನ್ ಡ್ರೈವ್ ನೀಡಿದ್ದೇನೆ. ಏಪ್ರಿಲ್ 21ರಂದು ಅರಕಲಗೂಡು ಮಾರುತಿ ಕಲ್ಯಾಣ ಮಂಟಪದಲ್ಲಿ ಪೆನ್ ಡ್ರೈವ್ ನೀಡಿದ್ದು, ಮಂಜುಗೆ ಪೆನ್ ಡ್ರೈವ್ ಕೊಟ್ಟ ಬಳಿಕವೇ ವೈರಲ್ ಆಗಿದೆ ಎಂದು ಪೋಸ್ಟ್ ಹಾಕಿದ್ದನು.

ಇದೀಗ ಈ ಸಂಬಂಧ ಜೆಡಿಎಸ್ ಶಾಸಕ ಎ.ಮಂಜು ಅವರು ನವೀನ್ ಗೌಡ ವಿರುದ್ದ ಎಸ್ ಐಟಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

Key words: Pen drive-case- JDS MLA- complains-SIT

Tags :
complainsJDS MLAPen drive-casesit
Next Article