For the best experience, open
https://m.justkannada.in
on your mobile browser.

ಪೆನ್ ಡ್ರೈವ್ ಹಂಚಿದವರನ್ನ ಟಚ್ ಮಾಡಿಲ್ಲ: ವಿದೇಶಕ್ಕೆ ಹೋಗಿರೋ ಪ್ರಜ್ವಲ್ ನ ಏಕೆ ಕರೆಸಿಲ್ಲ...?  ಹೆಚ್.ಡಿಕೆ ಕಿಡಿ.

12:11 PM May 14, 2024 IST | prashanth
ಪೆನ್ ಡ್ರೈವ್ ಹಂಚಿದವರನ್ನ ಟಚ್ ಮಾಡಿಲ್ಲ  ವಿದೇಶಕ್ಕೆ ಹೋಗಿರೋ ಪ್ರಜ್ವಲ್ ನ ಏಕೆ ಕರೆಸಿಲ್ಲ      ಹೆಚ್ ಡಿಕೆ ಕಿಡಿ

ಬೆಂಗಳೂರು,ಮೇ,14,2024 (www.justkannada.in): ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ, ಪೆನ್ ಡ್ರೈವ್ ಹಂಚಿದವರನ್ನ ೀವರೆಗೂ ಟಚ್ ಮಾಡಿಲ್ಲ. ವಿಡಿಯೋದಲ್ಲಿನ ಸಂತ್ರಸ್ತರ ಬಗ್ಗೆ ಕನಿಷ್ಟ ಕನಿಕರಾ ಇದ್ಯಾ ಸರ್ಕಾರಕ್ಕೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ, ವಿದೇಶಕ್ಕೆ ಹೋಗಿರೋ ಪ್ರಜ್ವಲ್ ನ ಏಕೆ ಕರೆಸಿಲ್ಲ...?  ಪ್ರಜ್ವಲ್ ನನಗೆ ಅಣ್ಣನ ಮಗನೇ ಇರವಹುದು.  ಪ್ರಜ್ವಲ್ ನನ್ನನ್ನ ಕೇಳಿ ವಿದೇಶಕ್ಕೆ ಹೋಗಿದ್ನಾ..? ಎಂದು ಪ್ರಶ್ನಿಸಿದರು.

ಪೆನ್ ಡ್ರೈವ್ ಹಂಚಿದವರನ್ನ ೀವರೆಗೂ ಟಚ್ ಮಾಡಿಲ್ಲ. ಪೆನ್ ಡ್ರೈವ್ ಹಂಚಿದವರನ್ನ ಈವರೆಗೂ ಬಂಧಿಸಿಲ್ಲ. ಘಟನೆಗೆ ಕಾರಣವಾದ ವ್ಯಕ್ತಿಯನ್ನೂ ಹಿಡಿಯಲ್ಲಿಲ್ಲ  ಎಫ್ ಐಆರ್ ಆದ ಒಬ್ಬ ವ್ಯಕ್ತಿಯನ್ನು ಹಿಡಿಯಲಿಲ್ಲ. ನವೀನ್ ಗೌಡ ಬಂಧಿಸಿಲ್ಲ. ಎಸ್ ಐಟಿ ತನಿಖೆ ವರದಿ ಶಾಸಕರಿಗೆ ಸರಬರಾಜಾಗುತ್ತಿದ್ಯಾ. ನಮ್ಮ ರಾಜ್ಯದಲ್ಲಿ ದೊಡ್ಡ ತಿಮಿಂಗಿಲ ಇದೆ. ಆ ತಿಮಿಂಗಿಲ ಯಾರೆಂದು ರಾಜ್ಯದ ಜನರಿಗೂ ಗೊತ್ತಿದೆ ಎಂದರು.

ನಾನು ಈಗಲೇ ಈ ಬಗ್ಗೆ ಏನು ಹೇಳುವುದಿಲ್ಲ. ನನ್ನ ಬಳಿ ಎಲ್ಲಾ ಇದೆ.  ಈಗಲೇ ನಾನು ಏನು ಹೇಳಲ್ಲ ವಿಡಿಯೋದಲ್ಲಿನ ಸಂತ್ರಸ್ತರ ಬಗ್ಗೆ ಕನಿಷ್ಟ ಕನಿಕರಾ ಇದ್ಯಾ ಸರ್ಕಾರಕ್ಕೆ..? ಇದರಲ್ಲಿ ಯಾವುದನ್ನೂ ವಹಿಸಿಕೊಳ್ಳುವ ಪ್ರಶ್ನೆಯ ಇಲ್ಲ ಎಂದು ಹೆಚ್.ಡಿಕೆ ಹೇಳಿದರು.

Key words: Pen drive, case, Prajwal, HDK

Tags :

.