HomeBreaking NewsLatest NewsPoliticsSportsCrimeCinema

ಕಸದ ರಾಶಿಯಲ್ಲಿ ಮನವಿ ಪತ್ರ ಪತ್ತೆ ಕೇಸ್: ಸಿದ್ಧರಾಮಯ್ಯ ಉಡಾಫೆ, ಉದಾಸೀನತೆಗೆ ಇದು ತಕ್ಕ ಸಾಕ್ಷಿ- ನಿರಂಜನ್ ಕುಮಾರ್

04:38 PM Jul 13, 2024 IST | prashanth

ಚಾಮರಾಜನಗರ,ಜುಲೈ,13,2024 (www.justkannada.in):  ಸಿಎಂ ಸಿದ್ದರಾಮಯ್ಯ ಸ್ವೀಕರಿಸಿದ ಮನವಿ ಪತ್ರಗಳು ಕಸದ ರಾಶಿಯಲ್ಲಿ ಪತ್ತೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಬಿಜೆಪಿ ಜಿಲ್ಲಾಧ್ಯಕ್ಷ  ನಿರಂಜನ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ನಿರಂಜನ್ ಕುಮಾರ್, ಸಿದ್ದರಾಮಯ್ಯ ಅವರ ಉಡಾಫೆ, ಉದಾಸೀನತೆಗೆ ತಕ್ಕ ಸಾಕ್ಷಿ ಇದಾಗಿದೆ. ಬಡವರು ಮನವಿ ಕೊಟ್ಟರೆ ಬೀಸಾಡಿ ಹೋಗಿದ್ದಾರೆ. ಸಿದ್ದರಾಮಯ್ಯ ಅವರು ರೈತರ ಬಗ್ಗೆ ಉದಾಸೀನ ತೋರಿದ್ದಾರೆ.  ಬಡವರ ಬಗ್ಗೆ ಉಡಾಫೆ ಮಾಡುತ್ತಾರೆ. ಎಷ್ಟರ ಮಟ್ಟಿಗೆ ಆಡಳಿತ ನಡೆಸುತ್ತಾ ಇದ್ದಾರೆ ಎಂಬುದಕ್ಕೆ ಇದೇ ಉದಾಹರಣೆ. ಸಿದ್ದರಾಮಯ್ಯ ಉಡಾಫೆ ಉತ್ತರ ಕೊಡುವುದರಲ್ಲಿ ಎಕ್ಸ್‌ ಫರ್ಟ್. ಬೇರೆಯವರಿಗೆ ಪಾಠ ಹೇಳುವ ಸಿದ್ದರಾಮಯ್ಯನವರೇ ಇದೇನಾ ನಿಮ್ಮ ಆಡಳಿತ ವೈಖರಿ.? ಎಂದು ಕಿಡಿಕಾರಿದರು.

ಜನರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಮನವಿ ಸಲ್ಲಿಸುತ್ತಾರೆ.  ಆದರೆ ಆ ಮನವಿಗಳು ಕಸದ ರಾಶಿ ಸೇರುತ್ತೀವೆ ಅಂದ್ರೆ ಎಷ್ಟರ ಮಟ್ಟಿಗೆ ಆಡಳಿತ ನಡೆಸುತ್ತಾ ಇದ್ದೀರಿ? ಸಿದ್ದರಾಮಯ್ಯ ತಮ್ಮ ಬೇಜವಾಬ್ದಾರಿತನವನ್ನು ತಮ್ಮ ಆಡಳಿತದಲ್ಲಿ ತೋರಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ  ಸಿ. ಎಸ್ ನಿರಂಜನ ಕುಮಾರ್ ಹರಿಹಾಯ್ದರು.

Key words: petition, garbage, Siddaramaiah, bjp, Niranjan Kumar

Tags :
BJPGarbageNiranjan KumarpetitionSiddaramaiah
Next Article