For the best experience, open
https://m.justkannada.in
on your mobile browser.

ವಿಮಾನ ಹಾರಾಟ ತಡವಾಗಿದ್ದಕ್ಕೆ ಪೈಲೆಟ್ ಮೇಲೆ ಹಲ್ಲೆ.

10:23 AM Jan 15, 2024 IST | prashanth
ವಿಮಾನ ಹಾರಾಟ ತಡವಾಗಿದ್ದಕ್ಕೆ ಪೈಲೆಟ್ ಮೇಲೆ ಹಲ್ಲೆ

ನವದೆಹಲಿ,ಜನವರಿ,15,2024(www.justkannada.in):  ಮಂಜಿನಿಂದಾಗಿ ವಿಮಾನ ಹಾರಾಟ ತಡವಾಗಿದ್ದಕ್ಕೆ ಪ್ರಯಾಣಿಕನೊಬ್ಬ ಪೈಲೆಟ್ ಮೇಲೆ ಹಲ್ಲೆ ನಡೆಸಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

ದೆಹಲಿಯ ಇಂದಿರಾಗಾಂಧಿ ಏರ್ ಪೋರ್ಟ್ ನಲ್ಲಿ ಈ ಘಟನೆ ನಡೆದಿದೆ. ಸಾಹಿಲ್ ಕಟಾರಿಯಾ ಎಂಬಾತನೇ ಪೈಲೆಟ್ ಮೇಲೆ ಹಲ್ಲೆ ಮಾಡಿದ ಪ್ರಯಾಣಿಕ. ಇಂಡಿಗೋ ಫ್ಲೈಟ್ ನ ಪೈಲೆಟ್ ಮೇಲೆ ಹಲ್ಲೆಯಾಗಿದ್ದು ಇದೀಗ ಪ್ರಯಾಣಿಕ ಸಾಹಿಲ್ ಕಟಾರಿಯಾ ದೂರು ದಾಖಲಾಗಿದೆ.

ಮಂಜಿನಿಂದಾಗಿ ಫ್ಲೈಟ್ 13 ಗಂಟೆ ತಡವಾಗಿದ್ದು, ಇದನ್ನು ಹೇಳುತ್ತಿದ್ದ ವೇಳೆ ಪೈಲೆಟ್ ಮೇಲೆ . ಸಾಹಿಲ್ ಕಟಾರಿಯಾ ಹಲ್ಲೆ ಮಾಡಿದ್ದು ಈತನನ್ನು ಅಧಿಕಾರಿಗಳು ಸಿಐಎಸ್ಎಫ್ ಗೆ ವಹಿಸಿದ್ದಾರೆ.

Key words: pilot - attacked - delaying - flight.

Tags :

.