ಪ್ರಧಾನಿ ಅಭ್ಯರ್ಥಿ ವಿಚಾರ: ಹೆಚ್.ಡಿ ದೇವೇಗೌಡರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು.
ಚಿಕ್ಕಮಗಳೂರು,ಏಪ್ರಿಲ್,22,2024 (www.justkannada.in): ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎಂದು ಪ್ರಶ್ನಿಸಿದ್ದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ದೇವೇಗೌಡರು ಆಕಸ್ಮಿಕವಾಗಿ ಪ್ರಧಾನಿ ಆಗಿಲ್ವಾ..? ಗೌಡರೇನು ಪಿಎಂ ಅಭ್ಯರ್ಥಿ ಎಂದು ಬಿಂಬಿತರಾಗಿದ್ದರಾ..? ದೇವೇಗೌಡರನ್ನ ಪಿಎಂ ಮಾಡಿದ್ದು ಕಾಂಗ್ರೆಸ್. ಎಂದು ಟಾಂಗ್ ಕೊಟ್ಟರು.
ಬಿಜೆಪಿಯ ಚಿಪ್ಪು ಜಾಹೀರಾತುಗೆ ಕಿಡಿಕಾರಿದ ಸಿಎಂ ಸಿದ್ದರಾಮಯ್ಯ, ಮಹಿಳೆಯರಿಗೆ 2 ಸಾವಿರ ರೂ ಕೊಡ್ತೀರೋದು ಚಿಪ್ಪಾ..? ಮಹಿಳೆಯರು ಬಸ್ ನಲ್ಲಿ ಉಚಿತವಾಗಿ ಓಡಾಡುತ್ತಿರೋದು ಚಿಪ್ಪಾ..? 5 ಕೆಜಿ ಅಕ್ಕಿ ಜಾಸ್ತಿ ಕೊಡ್ತೀರೋದು ಚಿಪ್ಪಾ..? ನಾವು ಕೊಟ್ಟಿದ್ರೆ ಚಿಪ್ಪು ಹಾಗಾದ್ರೆ ಬಿಜೆಪಿಯವರು ಏನು ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣವನ್ನ ಸಿಐಡಿ ತನಿಖೆಗೆ ಕೊಟ್ಟಿದ್ದೇವೆ. ಪ್ರಕರಣ ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಬಿಜೆಪಿಯವರು ರಾಜಕೀಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
Key words: PM, candidate, CM Siddaramaiah, HD Deve Gowda