For the best experience, open
https://m.justkannada.in
on your mobile browser.

ನಿತ್ಯ 3.5 ಗಂಟೆಗಳ ಕಾಲ ನಿದ್ರೆ, ಸಂಜೆ 6 ರ ನಂತರ ಊಟ ಮಾಡಲ್ಲ ಪ್ರಧಾನಿ ಮೋದಿ .

04:49 PM Feb 10, 2024 IST | mahesh
ನಿತ್ಯ 3 5 ಗಂಟೆಗಳ ಕಾಲ ನಿದ್ರೆ  ಸಂಜೆ 6 ರ ನಂತರ ಊಟ ಮಾಡಲ್ಲ ಪ್ರಧಾನಿ ಮೋದಿ

ಹೊಸ ದಿಲ್ಲಿ , ಫೆ. ೧೦, ೨೦೨೪ : ( justkannada ̤ in news ) ಸಂಸತ್ತಿನಲ್ಲಿ ಬಜೆಟ್ ಅಧಿವೇಶನದ ಕೊನೆಯ ದಿನ  ಕೆಲ ಸಂಸದರನ್ನು ಪ್ರಧಾನಿ ಮೋದಿ ತಮ್ಮೊಂದಿಗೆ ಊಟಕ್ಕೆ ಕರೆದುಕೊಂಡು ಹೋದಾಗ ಆಶ್ಚರ್ಯವಾಯಿತು.

ಸಂಸತ್ತಿನ ಕ್ಯಾಂಟೀನ್‌ನಲ್ಲಿ ಪ್ರಧಾನಿ ಮೋದಿಯವರೊಂದಿಗೆ ಕುಳಿತ ಎಂಟು ಸಂಸದರಿಗೆ ಅನ್ನ, ಖಿಚಡಿ, ಪನೀರ್, ದಾಲ್, ಮತ್ತು ರಾಗಿ ಸಿಹಿತಿಂಡಿಗಳನ್ನು ತಿನ್ನಲು  ನೀಡಲಾಯಿತು.

ಇದು ವಿಶೇಷ ಅವಕಾಶ ಎಂದು ಕೇಂದ್ರ ಸಚಿವ ಮತ್ತು ಸಂಸದ ಎಲ್ ಮುರುಗನ್ ಬಣ್ಣಿಸಿದ್ದಾರೆ. ಊಟದ ಬಳಿಕ ಪ್ರಧಾನಿ ಮೋದಿಯೇ ಅದರ  ಬಿಲ್ ಸಹ ಪಾವತಿಸಿದರು ಎಂದು ಸಚಿವರು ಎಎನ್‌ಐಗೆ ತಿಳಿಸಿದ್ದಾರೆ.

ಬಿಜೆಡಿ ನಾಯಕ ಸಸ್ಮಿತ್ ಪಾತ್ರಾ, ಆರ್‌ಎಸ್‌ಪಿ ನಾಯಕ ಎನ್‌ಕೆ ಪ್ರೇಮಚಂದ್ರನ್, ಟಿಡಿಪಿಯ ಕೆ ರಾಮ್ ಮೋಹನ್ ನಾಯ್ಡು, ಬಿಎಸ್‌ಪಿಯ ರಿತೇಶ್ ಪಾಂಡೆ, ಬಿಜೆಪಿಯ ಹೀನಾ ಗವಿತ್, ಎಸ್ ಫಾಂಗ್ನಾನ್ ಕೊನ್ಯಾಕ್, ಜಮ್ಯಾಂಗ್ ತ್ಸೆರಿಂಗ್ ನಾಮ್‌ಗ್ಯಾಲ್ ಮತ್ತು ಎಲ್ ಮುರುಗನ್ ಅವರು ಪ್ರಧಾನಿ ಮೋದಿಯವರ ಜತೆಗಿನ ಊಟಕೂಟದಲ್ಲಿ ಇದ್ದರು.

"ಎಲ್ಲರಿಗೂ ಒಂದೇ ಸಮಯದಲ್ಲಿ ಆಶ್ಚರ್ಯ ಮತ್ತು ಸಂತೋಷವಾಯಿತು. ಪ್ರಧಾನಿ ಮೋದಿ ಅವರು ಕರಾಚಿಗೆ ಭೇಟಿ ನೀಡಿದಾಗ ಅವರ ದಿನಚರಿ, ಅವರ ವ್ಯಾಯಾಮ, ಅವರ ವಿದೇಶಿ ಪ್ರವಾಸಗಳ ಬಗ್ಗೆ ಮಾತನಾಡಿದರು. ನಾವು ಅವರೊಂದಿಗೆ 45 ನಿಮಿಷಗಳನ್ನು ಕಳೆದೆವು. ಈ ವೇಳೆ  ನಾವು ಅವರಿಂದ ಅನೇಕ ಸ್ಪೂರ್ತಿದಾಯಕ ವಿಷಯಗಳನ್ನು ಕಲಿತಿದ್ದೇವೆ.  ಮೋದಿ ಅವರು ನಿತ್ಯ 3.5 ಗಂಟೆಗಳ ಕಾಲ ಮಲಗುತ್ತಾರೆ ಮತ್ತು ಸಂಜೆ 6 ಗಂಟೆಯ ನಂತರ ಊಟ ಮಾಡುವುದಿಲ್ಲ ಎಂಬ ಮಾಹಿತಿಯನ್ನು  ಎಲ್ ಮುರುಗನ್ ಹಂಚಿಕೊಂಡಿದ್ದಾರೆ.

"ಸಂಸದರು ಎಲ್ಲಾ ಪಕ್ಷಗಳ ಮತ್ತು ದೇಶದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುತ್ತಿದ್ದರು. ಪ್ರಧಾನಿ ಮೋದಿ ಸಾಮಾನ್ಯ ವ್ಯಕ್ತಿಯಂತೆ ನಮ್ಮೊಂದಿಗೆ ಕುಳಿತುಕೊಂಡರು, ಅವರು ಪ್ರಧಾನಿಯಂತೆ ಅಲ್ಲಿ ಕುಳಿತುಕೊಳ್ಳಲಿಲ್ಲ ಎಂದು ಸಂಸತ ವ್ಯಕ್ತಪಡಿಸಿದ ಮುರುಗನ್‌, ಊಟದ ನಂತರ ಪ್ರಧಾನಿ ಮೋದಿ ಅವರೇ ಊಟದ ಬಿಲ್ ಪಾವತಿಸಿದರು. ಮೋದಿ ಅವರ ಜತೆ ಕಳೆದ ಸಮಯದ ಅನುಭವದಿಂದ ಹೊರ ಬರಲು ನನಗೆ ಇನ್ನೂ ಸಾಧ್ಯವಾಗುತ್ತಿಲ್ಲ ಎಂದು ಮುರುಗನ್ ಹೇಳಿಕೊಂಡಿದ್ದಾರೆ.

"ಜೀವನದ ಅವಿಸ್ಮರಣೀಯ ಕ್ಷಣ" ಎಂದು ಮುರುಗನ್ ವಿಶೇಷ ಟಿಪ್ಪಣಿಯೊಂದಿಗೆ ಪ್ರಧಾನಿ ಮೋದಿ ಅವರೊಂದಿಗೆ ಊಟದ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರು  ಆನಂತರ ಸಂಸದರ ಜತೆಗಿನ ಒಟ್ಟಿಗೆ ಮಾಡಿದ ಊಟದ ಚಿತ್ರಗಳನ್ನು ಪೋಸ್ಟ್ ಮಾಡಿ, "ಒಂದು ರುಚಿಕರವಾದ ಊಟವನ್ನು ಆನಂದಿಸಿದೆ, ವಿವಿಧ ಪಕ್ಷಗಳು ಮತ್ತು ಭಾರತದ ವಿವಿಧ ಭಾಗಗಳ ಸಂಸದೀಯ ಸಹೋದ್ಯೋಗಿಗಳ ಒಟ್ಟಿಗೆ ಭೋಜನ ಹಾಗೂ ಸಮಯ ಕಳೆದದ್ದಕ್ಕೆ ಧನ್ಯವಾದಗಳು" ಎಂದು ಟ್ವೀಟ್‌ ಮಾಡಿದ್ದಾರೆ.

ಕೃಪೆ : ಹಿಂದೂಸ್ತಾನ್‌ ಟೈಮ್ಸ್‌

Key words : PM Modi ̲ sleeps for 3.5 hours ̲  doesn't eat ̲  after 6pm ̲ MP ̲  'surprise' lunch

English summary :

on the second last day of the Budget session in Parliament on Friday, some MPs were up for a surprise as PM Modi took them along with him for lunch. Union minister and MP L Murugan described it as a very special opportunity for the eight MPs who sat with PM Modi in the Parliament canteen to have a platter of rice, khichdi, paneer, daal, til and ragi sweets. PM Modi paid the bill, the minister ̤

Tags :

.