ಮಿಷನ್ 2024 ಕ್ಕೆ ಸಜ್ಜಾಗುವಂತೆ ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಕರೆ
09:09 AM Dec 24, 2023 IST
|
thinkbigh
ಬೆಂಗಳೂರು, ಡಿಸೆಂಬರ್ 24, 2023 (www.justkannada.in): ಲೋಕಸಭಾ ಚುನಾವಣೆಗೆ ತಯಾರಿ ನಡೆಸುವಂತೆ, ಮಿಷನ್ 2024 ಕ್ಕೆ ಸಜ್ಜಾಗುವಂತೆ ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಎರಡು ದಿನಗಳ ಸಭೆಯಲ್ಲಿ ಮೋದಿ ಈ ಕರೆ ನೀಡಿದ್ದಾರೆ.
ಮಹಿಳೆಯರು, ಯುವಕರು, ರೈತರು ಮತ್ತು ಬಡವರನ್ನ ದೇಶಾದ್ಯಂತ ಪಕ್ಷದೊಂದಿಗೆ ಸಂಪರ್ಕಿಸಲು ಬಿಜೆಪಿ ಅಭಿಯಾನ ನಡೆಸಲಿದೆ. ಜತೆಗೆ ಮೋದಿ ಅವರು ಜನವರಿಯಲ್ಲಿ ದೇಶಾದ್ಯಂತ ಯುವಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಬೂತ್ ಮಟ್ಟದಲ್ಲಿ ಪ್ರತಿಯೊಬ್ಬ ಮತದಾರರೊಂದಿಗೆ ಸಂಪರ್ಕದಲ್ಲಿರಲು ಬಿಜೆಪಿ ಕಾರ್ಯಕರ್ತರಿಗೆ ಸೂಚಿಸಲಾಗಿದೆ. ಕಾರ್ಯಕರ್ತರು ಆಯಾ ಬೂತ್'ಗಳ ಮತದಾರರ ಮನೆಗಳಿಗೆ ಹೋಗಿ ಅವರನ್ನ ಭೇಟಿ ಮಾಡಬೇಕು ಎಂದು ಹೇಳಲಾಗಿದೆ.
Next Article