ವಿಪಕ್ಷಗಳ ಟೀಕೆಗೆ ಉತ್ತರ: ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ಸಾರಾಂಶ ಹೀಗಿದೆ
ನವದೆಹಲಿ,ಜುಲೈ,2,2024 (www.justkannada.in): ಕೇಂದ್ರ ಎನ್ ಡಿಎ ಮೈತ್ರಿಕೂಟದ ಸರ್ಕಾರದ ವಿರುದ್ದ ವಿಪಕ್ಷಗಳು ಮಾಡಿದ ಹಲವು ಟೀಕೆಗಳಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಉತ್ತರ ನೀಡಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭಿಸುತ್ತಿದ್ದಂತೆ ವಿಪಕ್ಷಗಳು ಮಣಿಪುರ, ಮಣಿಪುರ, ವೀ ವಾಂಟ್ ಜಸ್ಟೀಸ್ ಎಂದು ಘೋಷಣೆ ಕೂಗಿ ಭಾಷಣಕ್ಕೆ ಅಡ್ಡಿಪಡಿಸಿದವು. ಗದ್ದಲದ ನಡುವೆಯೇ ಭಾಷಣ ಆರಂಭಿಸಿದ ಮೋದಿ, ಅನೇಕ ಗೌರವಾನ್ವಿತ ಸದಸ್ಯರು ರಾಷ್ಟ್ರಪತಿ ಭಾಷಣ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ವಿಶೇಷವಾಗಿ ಮೊದಲ ಬಾರಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದವರು ಸಂಸತ್ತಿನ ನಿಯಮಗಳನ್ನು ಅನುಸರಿಸಿ ಸದನದ ಹಿರಿಯ ಸದಸ್ಯರಂತೆ ವರ್ತಿಸಿದರು. ಅವರು ಸದನದ ಘನತೆಯನ್ನು ಹೆಚ್ಚಿಸಿದ್ದಾರೆ. ಇದು ವಿಶ್ವದ ಅತಿ ದೊಡ್ಡ ಚುನಾವಣೆ ಎಂಬುದನ್ನು ದೇಶ ಜಗತ್ತಿಗೆ ತೋರಿಸಿದೆ ಎಂದು ಹೇಳಿದರು.
ದೇಶದಲ್ಲಿ 3ನೇ ಬಾರಿಗೆ ಎನ್ ಡಿಎ ಅಧಿಕಾರಕ್ಕೆ ಬಂದಿರುವುದು ಐತಿಹಾಸಿಕ. ನಮ್ಮ ದೇಶದ ಮೇಲೆ ವೈರಿಗಳು ದಾಳಿ ಮಾಡಿದರೆ ನಾವು ನುಗ್ಗಿ ಹೊಡೆಯುತ್ತೇವೆ. ಇಂದು ನಮ್ಮ ದೇಶ ಬಹಳ ಸುಭದ್ರವಾಗಿದೆ ಹಾಗೂ ಸುರಕ್ಷಿತವಾಗಿದೆ. ಭಾರತವನ್ನು ವಿಶ್ವದ ನಂಬರ್ 1 ಮಾಡುವುದು ನಮ್ಮ ಗುರಿ. ಜನಸೇವೆ ಮಾಡಲು 3 ಪಟ್ಟು ಹೆಚ್ಚು ಕೆಲಸ ಮಾಡುತ್ತೇವೆ. ವಿಕ್ಷಿತ ಭಾರತ'ಕ್ಕಾಗಿ ನಮ್ಮ ಸಂಕಲ್ಪವನ್ನು ಈಡೇರಿಸಲು ನಾವು ದಣಿವರಿಯದ, ಪ್ರಾಮಾಣಿಕ, ಬದ್ಧ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ನಾವು ಜನರಿಗೆ ಭರವಸೆ ನೀಡಲು ಬಯಸುತ್ತೇವೆ ಎಂದರು.
ಸಂಸತ್ತಿನಲ್ಲಿ ಸಂವಿಧಾನದ ಪ್ರತಿಗಳನ್ನು ಪ್ರದರ್ಶಿಸಿದ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ ಪ್ರಧಾನಿ ಮೋದಿ, ಸಂವಿಧಾನವನ್ನು ಕೈಯಲ್ಲಿ ಹಿಡಿದಿರುವವರು ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಲು ಅದನ್ನು ಬಳಸಲು ಸಾಧ್ಯವಿಲ್ಲ ಎಂದರು.
2014 ರ ಹಿಂದೆ ದೇಶದ ಮೇಲೆ ಹಲವು ಉಗ್ರರ ದಾಳಿ ನಡೆಯುತ್ತಿತ್ತು. ದಾಳಿ ನಡೆದರೂ ಸರ್ಕಾರ ಸುಮ್ಮನೆ ಇರುತ್ತಿತ್ತು. 2014 ರ ನಂತರ ನಾವು ಉಗ್ರರನ್ನು ನುಗ್ಗಿ ಹೊಡೆಯುತ್ತಿದ್ದೇವೆ. ಜನರು ನಮ್ಮನ್ನು ಆಯ್ಕೆ ಮಾಡಿದಾಗ ಆಗ ಪರಿವರ್ತನೆಯ ಯುಗ ಪ್ರಾರಂಭವಾಯಿತು” ಎಂದು ಪ್ರಧಾನಿ ಮೋದಿ ಹೇಳಿದರು.
2014ಕ್ಕೂ ಮೊದಲು ಕಲ್ಲಿದ್ದಲು ಹಗರಣಗಳು ಹಲವರ ಕೈಗೆ ಕಪ್ಪುಚುಕ್ಕೆ ತಂದಿತ್ತು. ಒಂದು ಕಾಲದಲ್ಲಿ ಫೋನ್ ಬ್ಯಾಂಕಿಂಗ್ ಮೂಲಕ ವಂಚನೆಗಳು ನಡೆಯುತ್ತಿದ್ದವು. 2014 ರ ನಂತರ ನೀತಿಗಳು ಬದಲಾದವು, ಕೆಲಸದ ವೇಗವು ಬದಲಾಯಿತು. ಇಂದು, ಭಾರತದ ಬ್ಯಾಂಕುಗಳು ಗರಿಷ್ಠ ಲಾಭವನ್ನು ಗಳಿಸುತ್ತಿವೆ. 2014 ರ ಮೊದಲು ಭಯೋತ್ಪಾದಕರು ಇಚ್ಛೆಯಂತೆ ದಾಳಿ ಮಾಡುವ ಸಮಯವಿತ್ತು. ಸರ್ಕಾರಗಳು ಮತ್ತು ಇಂದು ಹಿಂದೂಸ್ತಾನ್ ಘರ್ ಮೇ ಘುಸ್ ಕೆ ಮಾರ್ತಾ ಹೈ. ಇದು ಸರ್ಜಿಕಲ್ ಸ್ಟ್ರೈಕ್‌ಗಳನ್ನು ಮಾಡುತ್ತದೆ ಮತ್ತು ಭಯೋತ್ಪಾದಕರನ್ನು ನಿಭಾಯಿಸುವವರಿಗೆ ಪಾಠ ಕಲಿಸುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಇದೇ ವೇಳೆ ವಿಪಕ್ಷಗಳ ವಿರುದ್ದ ವಾಗ್ದಾಳಿ ಮುಂದುವರೆಸಿ, ರಾಹುಲ್ ಗಾಂಧಿ ಅವರ ಕಟಾಕಟ್ ಹೇಳಿಕೆಗೆ ತಿರುಗೇಟು ನೀಡಿದ ಪ್ರಧಾನಿ ಮೋದಿ, ಬಾಲಕನ ಬುದ್ದಿ ಇನ್ನೂ ಬಿಟ್ಟಿಲ್ಲ ಕಾಂಗ್ರೆಸ್ ಸುಳ್ಳುಗಳ ರಾಜನೀತಿಯನ್ನ ಸೃಷ್ಠಿಸಿದೆ. ನಿನ್ನೆ ದೇಶದ ಜನರು ತಮ್ಮ ಬ್ಯಾಂಕ್ ಖಾತೆಯನ್ನ ಪರಿಶೀಲಿಸಿದರು. ಆದರೆ ಅವರ ಖಾತೆಗೆ 8,500 ರೂ ಬಂದಿಲ್ಲ ಎಂದು ಲೇವಡಿ ಮಾಡಿದರು. ನಾಳೆ ಅಗ್ನೀವೀರ್ ತೆಗೆದು ಹಾಕ್ತಾರೆಂದು ಸುಳ್ಳುಗಳನ್ನ ಹೇಳಿದ್ದಾರೆ . ಎಂಎಸ್ ಪಿ ನೀಡುತ್ತಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
Key words: PM Modi, speech, Parliament, session, LokSabha