HomeBreaking NewsLatest NewsPoliticsSportsCrimeCinema

ಆ.10 ರಂದು ವೈನಾಡಿಗೆ ಪ್ರಧಾನಿ ಮೋದಿ ಭೇಟಿ, ವೈಮಾನಿಕ ಸಮೀಕ್ಷೆ

02:02 PM Aug 08, 2024 IST | prashanth

ನವದೆಹಲಿ ,ಆಗಸ್ಟ್,8,2024 (www.justkannada.in): ಭಾರಿ ಮಳೆಯಿಂದಾಗಿ ಗುಡ್ಡ ಕುಸಿದು ಅಪಾರ ಪ್ರಮಾಣದ ಸಾವು ನೋವಿ ಸಂಭವಿಸಿದ ಕೇರಳದ ವಯನಾಡಿಗೆ ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 10 ರಂದು (ಶನಿವಾರ) ಕೇರಳದ ವಯನಾಡ್'ಗೆ ಭೇಟಿ ನೀಡಿ ಹೆಲಿಕಾಪ್ಟರ್ ಮೂಲಕ ಭೂಕುಸಿತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.  ನಂತರ ಅವರು ಪ್ರಸ್ತುತ 10,000ಕ್ಕೂ ಹೆಚ್ಚು ಸ್ಥಳಾಂತರಗೊಂಡ ವ್ಯಕ್ತಿಗಳು ಆಶ್ರಯ ಪಡೆದಿರುವ ಹಲವಾರು ಪರಿಹಾರ ಶಿಬಿರಗಳಿಗೆ ಭೇಟಿ ನೀಡಲಿದ್ದಾರೆ.

ಹಾಗೆಯೇ ಗುಡ್ಡಕುಸಿತದಲ್ಲಿ ಮೃತಪಟ್ಟವರ ಕುಟುಂಬಗಳನ್ನ ಭೇಟಿಯಾಗಿ ಸಾಂತ್ವನ  ಹೇಳಲಿದ್ದು, ಗಾಯಾಳುಗಳನ್ನ ಭೇಟಿಯಾಗಿ ಪ್ರಧಾನಿ ಮೋದಿ ಆರೋಗ್ಯ ವಿಚಾರಿಸಲಿದ್ದಾರೆ.  ಸಂತ್ರಸ್ತರ ಸಮಸ್ಯೆ ರಕ್ಷಣಾಕಾರ್ಯದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಭೂಕುಸಿತದಿಂದ 400ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

Key words: PM Modi, visits, Vainadu, aerial survey

Tags :
aerial surveyPM ModiVainaduvisits
Next Article